HEALTH TIPS

ಎಡನೀರು ಶ್ರೀಗಳ ಚಾತುರ್ಮಾಸ್ಯ-ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಾಳೆಯಿಂದ


    ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 59ನೇ ಚಾತುರ್ಮಾಸ್ಯ ವ್ರತಾಚರಣೆಯು ಜು.25 ರಿಂದ ಸ.14ರ ವರೆಗೆ ಎಡನೀರು ಶ್ರೀಸಂಸ್ಥಾನದಲ್ಲಿ ನಡೆಯುತ್ತಿದ್ದು, ಆ.25 ರಿಂದ 31ರ ರೆಗೆ ಪ್ರತಿನಿತ್ಯ ಸಂಜೆ 7 ರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
   ಆ.25 ರಂದು ಭಾನುವಾರ ಶ್ರೀಗಳ ನಿರ್ದೇಶನದಲ್ಲಿ ಪಾರ್ಥ ಸಾರಥ್ಯ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಎಡನೀರು ಶ್ರೀಗಳು, ಸೀತಾರಾಮ ತೋಲ್ಪಡಿತ್ತಾಯ, ಜನಾರ್ದನ ತೋಲ್ಪಡಿತ್ತಾಯ ಭಾಗವಹಿಸುವರು. ಅರ್ಥಧಾರಿಗಳಾಗಿ ಡಾ.ರಮಾನಂದ ಬನಾರಿ, ಉಡುವೆಕೋಡಿ ಸುಬ್ಬಪ್ಪಯ್ಯ, ಸುರೇಶ ಕುದ್ರೆಂತಾಯ, ರಾಜೇಂದ್ರ ಕಲ್ಲೂರಾಯ ವಿವಿಧ ಪಾತ್ರಗಳನ್ನು ನಿರ್ವಹಿಸುವರು.
   ಆ.26 ರಂದು ಪುತ್ತೂರಿನ ನಾಟ್ಯರಂಗದ ವಿದುಷಿಃ ಮಂಜುಳಾ ಸುಬ್ರಹ್ಮಣ್ಯ ಮತ್ತು ತಂಡದವರಿಂದ ನೃತ್ಯಸಂಧ್ಯಾ ನಡೆಯಲಿದೆ. ಆ.27 ರಂದು ಲಕ್ಷ್ಮಣಕುಮಾರ್ ಮರಕಡ ನಿರ್ದೇಶನದಲ್ಲಿ ಶ್ರೀಕೃಷ್ಣ ಲೀಲಾಮೃತ ಯಕ್ಷಗಾನ ಬಯಲಾಟ ನಡೆಯಲಿದೆ. ಆ.28 ರಂದು ಶ್ರೀಎಡನೀರು ಮಠಾಧೀಶರ ನಿರ್ದೇಶನದಲ್ಲಿ ಎಡನೀರು ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿಯವರಿಂದ ಸುದರ್ಶನ-ಭಾರ್ಗವ ವಿಜಯ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಆ.29 ರಂದು ಲಯ ಲಹರಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ವಿದ್ವಾನ್ ಎಂ.ಕೆ.ಪ್ರಾಣೇಶ್ ಬೆಂಗಳೂರು(ಕೊಳಲು), ವಿದ್ವಾನ್ ವಿ.ಎಸ್.ಯಶಸ್ವಿ ಬೆಂಗಳೂರು(ಪಿಟೀಲು), ವಿದ್ವಾನ್ ಅನೂರು ಅನಂತಕೃಷ್ಣ ಶರ್ಮ ಬೆಂಗಳೂರು ಮತ್ತು ಶಿಷ್ಯವೃಂದದವರಿಂದ ತಾಳವಾದ್ಯ ಪ್ರದರ್ಶನ ನಡೆಯಲಿದೆ. ಆ.30 ರಂದು ಯಕ್ಷ-ಗಾನ ಪ್ರದರ್ಶನ ನಡೆಯಲಿದ್ದು, ದಿನೇಶ್ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ ಭಾಗವತಿಕೆಯಲ್ಲಿ ಹಾಗೂ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಸುನಿಲ್ ಭಂಡಾರಿ, ಶ್ರೀಕೃಷ್ಣ ಪ್ರಕಾಶ ಉಳಿತ್ತಾಯ, ಲವಕುಮಾರ ಐಲ ಚೆಂಡೆ ಮದ್ದಳೆಯಲ್ಲಿ ಸಹಕರಿಸುವರು. ಆ.31 ರಂದು ಸಂಗೀತ ಕಚೇರಿ ನಡೆಯಲಿದ್ದು, ವಿದುಷಿಃ ಉಷಾ ಈಶ್ವರ ಭಟ್ ಹಾಡುಗಾರಿಕೆ ನಡೆಸುವರು. ವಿದ್ವಾನ್ ವೇಣುಗೋಪಾಲ ಶಾನುಭೋಗ್(ವಯಲಿನ್), ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು(ಮೃದಂಗ), ವಿದ್ವಾನ್ ಈಶ್ವರ ಭಟ್(ಘಟಂ)ನಲ್ಲಿ ಸಹಕರಿಸುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries