ಮಂಜೇಶ್ವರ: ಮಾಸ್ಟರ್ ಆಟ್ರ್ಸ್ ಆ್ಯಂಡ್ ಸ್ಪೋಟ್ರ್ಸ್ ಕ್ಲಬ್ ಮೀಯಪದವಿನ 8ನೇ ವರ್ಷದ ವಾರ್ಷಿಕೊತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಇಂದು ಮೀಯಪದವು ಶಾಲಾ ಮೈದಾನದಲ್ಲಿ ಜರಗಲಿದೆ.
ಕಾರ್ಯಕ್ರವನ್ನು ಮೀಯಪದವು ಆಶಾ ಕ್ಲಿನಿಕ್‍ನ ವೈದ್ಯರಾದ ಡಾ.ಎಸ್.ಎನ್.ಭಟ್ ಅವರು ಉದ್ಘಾಟಿಸುವರು. ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸಂಚಾಲಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಹಾಗೂ ಕ್ಲಬ್ಬಿನ ಗೌರವಾಧ್ಯಕ್ಷ ಪುಷ್ಪರಾಜ ಶೆಟ್ಟಿ ತಲೇಕಳ ಕಾರ್ಯಕ್ರಮಕ್ಕೆ ಶುಭ ಹಾರೈಸುವರು. ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀಕೃಷ್ಣ ವೇಷ ಮೆರವಣಿಗೆ, ಶ್ರೀಕೃಷ್ಣ ವೇಷ ಸ್ಪರ್ಧೆ, ಮಹಾಭಾರತ ರಸಪ್ರಶ್ನೆ ಸ್ಪರ್ಧೆ, ಭಕ್ತಿಗೀತೆ ಸ್ಪರ್ಧೆ ಹಾಗೂ ಹಲವು ಆಟೋಟ ಸ್ಪರ್ಧೆಗಳು ಜರಗಲಿದೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾರ್ರ್ವಕ ಎ.ಯು.ಪಿ. ಶಾಲೆಯ ಆಡಳಿತ ಸಲಹೆಗಾರರಾದ ಶ್ರೀಧರ ರಾವ್ ಆರ್.ಎಂ. ವಹಿಸಲಿರುವರು. ಕಾರ್ಯಕ್ರಮದಲ್ಲಿ ಶಾರದಾ ಆಟ್ರ್ಸ್ ಮತ್ತು ಐಸಿರಿ ಕಲಾವಿದೆರ್ ಇದರ ಸಂಚಾಲಕರಾದ ಕೃಷ್ಣ ಜಿ.ಮಂಜೇಶ್ವರ, ಕೃಷಿಕರಾದ ಶಂಕರನಾರಾಯಣ ಭಟ್ ಅಡ್ಕತ್ತಿಮಾರ್ ಹಾಗೂ ಕ್ಲಬ್ಬಿನ ಗೌರವ ಸಲಹೆಗಾರರಾದ ಜನಾರ್ಧನ ಎಸ್. ಉಪಸ್ಥಿತರಿರುವರು.

