ಮಂಜೇಶ್ವರ: ವಿಶ್ವ ಹಿಂದು ಪರಿಷತ್, ಬಜರಂಗ ದಳ, ಮಾತೃ ಶಕ್ತಿ ಮಂಜೇಶ್ವರ ಪ್ರಖಂಡ ಸತ್ಸಂಗ ಸಮಿತಿಯ ಆಶ್ರಯದಲ್ಲಿ ಆಷಾಢ ಮಾಸದ ರಾಮಾಯಣ ಮಾಸಾಚರಣೆಯ ಪ್ರಯುಕ್ತ ಜರಗಿದ ಮನೆಮನೆ ಭಜನಾ ಸತ್ಸಂಗದ ಸಮಾರೋಪ ಸಮಾರಂಭವು ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಇತ್ತೀಚೆಗೆ ನಡೆಯಿತು.
ವಿಶ್ವ ಹಿಂದು ಪರಿಷತ್ ಮಂಜೇಶ್ವರ ಪ್ರಖಂಡ ಕಾರ್ಯದರ್ಶಿ ಯಾದವ ಕೀರ್ತೇಶ್ವರ ಅವರ ನೇತೃತ್ವದಲ್ಲಿ ಭಜನಾ ಸತ್ಸಂಗ 2 ಗಂಟೆಗಳ ಕಾಲ ಜರಗಿತು. ಆ ಬಳಿಕ ಜರಗಿದ ಧಾರ್ಮಿಕ ಸಭೆಯಲ್ಲಿ ವಿಶ್ವ ಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿಯವರು ವಿಶೇಷ ಉಪನ್ಯಾಸ ನೀಡಿದರು. ವಿಶ್ವ ಹಿಂದು ಪರಿಷತ್ ಮಂಗಳೂರು ಗ್ರಾಮಾಂತರ ಕಾಸರಗೋಡು ಜಿಲ್ಲಾ ಅಧ್ಯಕ್ಷ ಅಂಗಾರ ಶ್ರೀಪಾದ, ಕಾರ್ಯದರ್ಶಿ ಶಂಕರ ಭಟ್ ಉಳುವಾನ, ಮಾತೃ ಶಕ್ತಿ ಅಧ್ಯಕ್ಷೆ ಮೀರಾ ಆಳ್ವ, ಮಂಜೇಶ್ವರ ಪ್ರಖಂಡ ಅಧ್ಯಕ್ಷ ಸುರೇಶ್ ಶೆಟ್ಟಿ ಪರಂಕಿಲ, ಮೀಂಜ ಖಂಡ ಸಮಿತಿ ಸತ್ಸಂಗ ಪ್ರಮುಖ್ ವಸಂತ ಭಟ್ ತೊಟ್ಟೆತ್ತೋಡಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರದ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರೇಮಾ ಕೆ.ಭಟ್ ತೊಟ್ಟೆತ್ತೋಡಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಹಾಗೂ ಖ್ಯಾತ ಭಜನಾ ಸಂಕೀರ್ತನೆಕಾರ ಮಾರಪ್ಪ ಭಂಡಾರಿ ಕೌಡೂರು ಬೀಡು, ಮಾಧವ ಆಚಾರ್ಯ ಮದಂಗಲ್ಲು, ಗುರುವ ಎ.ಕೆ. ಅಡ್ಡಂತ್ರ ಕಾಡು, ಮೋನಪ್ಪ ಪೂಜಾರಿ ಕಲ್ಕಾರು, ಶಿವಾನಂದ ಪ್ರತಾಪನಗರ ಅವರನ್ನು ಸಮ್ಮಾನಿಸಲಾಯಿತು. ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಾರ್ದನ ಆಚಾರ್ಯ ಮೂಡಂಬೈಲು ವಂದಿಸಿದರು. ಹರೀಶ್ ಶೆಟ್ಟಿ ಮಾಡ ಕಾರ್ಯಕ್ರಮ ನಿರೂಪಿಸಿದರು. ರಾಜರಾಜೇಶ್ವರಿ ಭಜನಾ ಸಂಘ ಎಲಿಯಾಣ, ಕುದ್ದುಪದವು ಮಹಿಳಾ ಭಜನಾ ಸಂಘ, ಶ್ರೀ ಮಹಾಲಿಂಗೇಶ್ವರ ಫ್ರೆಂಡ್ಸ್ ನಡುಗುಡ್ಡೆ ಸಹಕಾರ ನೀಡಿದರು.


