HEALTH TIPS

ದಿ.ಪಿ.ಕೆ.ಶ್ರೀಕೃಷ್ಣ ಭಟ್ ಜನ್ಮ ದಿನಾಚರಣಾ ಕೃತಿ ಚಿಂತನ ಕಾರ್ಯಕ್ರಮ-ತಳಸ್ಪರ್ಶಿ ಅಧ್ಯಯನದಿಂದ ಶ್ರೀಕೃಷ್ಣ ಭಟ್ ಅವರ ಕೃತಿಗಳು ಸರ್ವಮಾನ್ಯ-ಆರ್.ಕೆ.ಉಳಿಯತ್ತಡ್ಕ

 
     ಬದಿಯಡ್ಕ: ಶಾಸ್ತ್ರ,ನಂಬಿಕೆ,ಜನಪದ ನಂಬಿಕೆ, ಸಂಪ್ರದಾಯ ಮೊದಲಾದ ವಿವಿಧ ಪಾರಂಪರಿಕ ಸತ್ವವನ್ನು ಸಂಪನ್ಮೂಲಗಳಿಂದ ಸಂಗ್ರಹಿಸಿ ಹೊಸ ಜಗತ್ತಿಗೆ ಕೃತಿಯ ಮೂಲಕ ನೀಡುವುದು ಅತಿದೊಡ್ಡ ಮಾನವ ಸಾಧನೆಯಾಗಿ ಬದುಕಿನ ಕೃತಾರ್ಥತೆಗೆ ಕಾರಣವಾಗುತ್ತದೆ. ಅಂತಹ ಸಾಧಕರಲ್ಲಿ ದಿ.ಪಿ.ಕೆ.ಶ್ರೀಕೃಷ್ಣ ಭಟ್ ಪಂಜಿತ್ತಡ್ಕ ಅತ್ಯಪೂರ್ವ ವ್ಯಕ್ತಿತ್ವದವರು ಎಂದು ಹಿರಿಯ ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ತಿಳಿಸಿದರು.
   ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಗುರುವಾರ ಬದಿಯಡ್ಕದ ರಾಮಲೀಲಾ ಯೋಗ ಶಿಕ್ಷಣ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ದಿ.ಪಿ.ಕೆ.ಶ್ರೀಕೃಷ್ಣ ಭಟ್ ಪಂಜಿತ್ತಡ್ಕ ಅವರ ಜನ್ಮ ದಿನಾಚರಣೆಯ ಅಂಗವಾಗಿ ಪಿ.ಕೆ.ಶ್ರೀಕೃಷ್ಣ ಭಟ್ ಅವರ ಎಂಫಿಲ್ ಪದವಿ ಕೃತಿಯಾದ ಕಾಸರಗೋಡಿನ ಕನ್ನಡಿಗರ ಜನಪದ ನಂಬಿಕೆಗಳು ಕೃತಿಯ ಚಿಂತನ-ಮಂಥನ ನಡೆಸಿ ಅವರು ಮಾತನಾಡಿದರು.
    ನಂಬಿಕೆ, ಜೀವನ ಕ್ರಮಗಳಿಗೆ ಸಂಬಂಧಿಸಿ ಪಾಶ್ಚಾತ್ಯ, ಪೌರಸ್ಯ, ಸ್ಥಳೀಯ, ಜನಪದ ನಂಬಿಕೆಗಳೇ ಮೊದಲಾದವುಗಳು,ಮಾನುಷ ನಂಬಿಕೆಗಳು, ಅತಿ ಮಾನುಷ ನಂಬಿಕೆಗಳು, ಮನುಷ್ಯೇತರ ನಂಬಕೆಗಳು, ಪ್ರಾಕೃತಿಕ ನಂಬಿಕೆಗಳು, ಸಂಕೀರ್ಣ ನಂಬಿಕೆಗಳು ಮೊದಲಾದವುಗಳನ್ನು ತಳಸ್ಪರ್ಶಿ ಚಿಂತನ ನಡೆಸಿದ್ದ ಪಿ.ಕೆ.ಶ್ರೀಕೃಷ್ಣ ಭಟ್ ಮೇರು ವ್ಯಕ್ತಿತ್ವದವರು. ಮೂಲ ನಂಬಿಕೆಗಳನ್ನು ಎತ್ತಿಹಿಡಿದು, ಹೊಸ ಭಾಷ್ಯ ಬರೆಯುವ ಮೂಲಕ, ಅದರೊಳಗಿನ ಸತ್ಯಗಳನ್ನು ನಿರೂಪಿಸುವ ಪಿ.ಕೆ.ಶ್ರೀಕೃಷ್ಣ ಭಟ್ ಅವರ ಅಧ್ಯಯನಶೀಲತೆ ವ್ಯಾಪಕ ಅರಿವನ್ನು ವಿಸ್ತರಿಸುವಲ್ಲಿ ಅತ್ಯಪೂರ್ವವಾಗಿದೆ ಎಂದು ಅವರು ತಿಳಿಸಿದರು. ಅನುಭವಗಳೊಂದಿಗೆ, ಅಧ್ಯನಶೀಲರಾಗಿ ಅವರ ಕೃತಿ ವೈಜ್ಞಾನಿಕ ತಳಹದಿಯಿಂದ ಕೂಡಿದೆ ಎಂದು ಅವರು ಈ ಸಂದರ್ಭ ತಿಳಿಸಿದರು. ಕುಮಾರವ್ಯಾಸ ಮತ್ತು ಎಳುತ್ತಚ್ಚನ್ ಕೃತಿಗಳ ತೌಲನಿಕ ಅಧ್ಯಯನ ವಿಷಯದಲ್ಲಿ ಪಿಎಚ್‍ಡಿ ಪ್ರಬಂಧ ಮಂಡಿಸಿದ್ದರೂ, ಈ ಮಧ್ಯೆ ಅವರು ಅಗಲಿರುವುದು ತುಂಬಲಾರದ ನಷ್ಟ ಎಂದರು. ಆದರ್ಶ ಶಿಕ್ಷಕನಾಗಿ, ಸಜ್ಜನ ವ್ಯಕ್ತಿತ್ವದವರಾದ ಭಟ್ ಅವರ ನೆನಪುಗಳು ಗಡಿನಾಡು ಅಭಾರಿಯಾಗಿರುತ್ತದೆ ಎಂದು ತಿಳಿಸಿದರು.
    ಸಮಾರಂಭವನ್ನು ಸೀತಾಲಕ್ಷ್ಮೀ ಪಂಜಿತ್ತಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಧುರೈ ಕಾಮರಾಜ ವಿವಿಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ದಿ.ಪಿ.ಕೆ.ಶ್ರೀಕೃಷ್ಣ ಭಟ್ ಅವರೊಂದಿಗಿನ ನಿಕಟ ಒಡನಾಡ ಬಗ್ಗೆ ನೆನಪುಗಳನ್ನು ಹಂಚಿಕೊಂಡರು.
    ಶ್ರೀಶ ಕುಮಾರ್ ಪಂಜಿತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಕೇರಳ ಗಡಿನಾಡ ಘಟಕದ ಗೌರವ ಕಾರ್ಯದರ್ಶಿಗಳಾದ ಪಿ.ರಾಮಚಂದ್ರ ಭಟ್ ಧರ್ಮತ್ತಡ್ಕ ಅವರು ಸ್ವಾಗತಿಸಿ, ನವೀನಚಂದ್ರ ಮಾಸ್ತರ್ ಮಾನ್ಯ ವಂದಿಸಿದರು. ಸೌಮ್ಯಾಪ್ರಸಾದ್ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.
   ಸಮಾರಂಭದಲ್ಲಿ ದಿ.ಪಿ.ಕೆ.ಶ್ರೀಕೃಷ್ಣ ಭಟ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ಕವಿತಾ ಸ್ಪರ್ಧೆಯ ಬಹುಮಾನಿತರಾದ ಎಸ್.ವಿಜಯಕುಮಾರ್ ಬೆಂಗಳೂರು(ಪ್ರಥಮ), ವಿ.ಬಿ.ಕುಳಮರ್ವ, ವೆಂಕಟ್ ಭಟ್ ಎಡನೀರು ಹಾಗೂ ಅಮೃತ್ ಬಿ.ವಿ. ಮೂಡಬಿದ್ರೆ(ಪ್ರೋತ್ಸಾಹಕ) ರಿಗೆ ಬುಮಾನಗಳನ್ನು ವಿತರಿಸಿ ಅಭಿನಂದಿಸಲಾಯಿತು. ಬಳಿಕ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಗಾಯನ ತಂಡದಿಂದ ಸುಗಮ ಸಂಗೀತ ನಿರ್ದೇಶಕಿ ಡಾ.ಸ್ನೇಹ ಪ್ರಕಾಶ್ ಕುಂಬಳೆ ಅವರ ನಿರ್ದೇಶನದಲ್ಲಿ ಪಿ.ಕೆ.ಶ್ರೀಕೃಷ್ಣ ಭಟ್ ಪಂಜಿತ್ತಡ್ಕ ಹಾಗೂ ಬಹುಮಾನಿತ ಕವಿತೆಗಳ ಗಾಯನ ನಡೆಯಿತು. ಅನಘ್ರ್ಯ ಇಕ್ಕೇರಿ,ಅನ್ವಿತಾ ತಲ್ಪನಾಜೆ, ಪ್ರಗತಿ ಶರ್ಮ ಪಂಜಿತ್ತಡ್ಕ, ಸಮನ್ವಿತಾ ವಳಕ್ಕುಂಜ, ಶೃಜನ್ ಕೇಶವ್ ಚಂಬಲ್ತಿಮಾರ್, ಚಂದನ್ ಪಿ.ಆರ್., ತಸ್ಮೈ ಪಿ.ಆರ್., ಶತೋದರಿ ತಿಮ್ಮಕಜೆ ಅವರು ಗಾಯನ ನಡೆಸಿದರು. ಜಗದೀಶ್ ಉಪ್ಪಳ(ಕೀಬೋರ್ಡ್)  ಹಾಗೂ ಸ್ವರಾಜ್ ಉಪ್ಪಳ(ತಬಲಾ) ಹಿನ್ನೆಲೆಯಲ್ಲಿ ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries