ಮಂಜೇಶ್ವರ: ಇಲ್ಲಿನ ಎಸ್.ಎ.ಟಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಂದ ಇತ್ತೀಚೆಗೆ ವಿವಿಧ ಸಾಂಸ್ಕøತಿಕ ಕಲಾ ಪ್ರದರ್ಶನ ಜರಗಿತು.
ಪ್ರತಿಕೂಲ ಹವಾಮಾನದಿಂದಾಗಿ ಮುಂದೂಡಲ್ಪಟ್ಟಿದ್ದ ಈ ಸಮಾರಂಭದಲ್ಲಿ ಪ್ರಭಾರ ಮುಖ್ಯೋಪಾಧ್ಯಾಯನಿ ಸುಮನಾ ಐಲ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಫರೀದ್, ಉಪಾಕ್ಷೆ ಜಯಶ್ರೀ, ಪದಾಧಿಕಾರಿಗಳು, ರಕ್ಷಕರು ಉಪಸ್ಥಿತರಿದ್ದರು. ಕಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ನೃತ್ಯ ಪ್ರದರ್ಶನ, ಶಾಲಾ ಸ್ಕೌಟ್ ಗೈಡ್ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಡ್ರಿಲ್ ಪ್ರದರ್ಶನ ನಡೆಯಿತು. ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ತೇಜಸ್ ಕಿರಣ್, ಅಧ್ಯಾಪಕ ಪೂರ್ಣಯ್ಯ ಪುರಾಣಿಕ್, ಅಜಿತ್, ಮಹೇಶ್ ಕೆ.ವಿ, ನಾಗೇಶ್ ವಿ, ಗಣೇಶ್, ಜಯಪ್ರಕಾಶ್ ಶೆಟ್ಟಿ, ಸುಕನ್ಯಾ ಕೆ.ಟಿ, ಪೂರ್ಣಿಮಾ ಟೀಚರ್, ಅನಸೂಯ ಟೀಚರ್, ಸುಮತಿ ಟೀಚರ್ ಮತ್ತಿತರರು ಉಪಸ್ಥಿತರಿದ್ದರು. ಅಧ್ಯಾಪಕ ಕಾರ್ಯದರ್ಶಿ ಈಶ್ವರ ಕಿದೂರು ಕಾರ್ಯಕ್ರಮ ನಿರೂಪಿಸಿದರು.



