ಬದಿಯಡ್ಕ: ಗುರುಸಾರ್ವಭೌಮ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಮಂಗಳೂರಿನ ರಾಘವೇಂದ್ರಸ್ವಾಮಿ ನೆಲ್ಲಿಕಾಯಿಮಠದಲ್ಲಿ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಹಿರಿಯ ವಿದ್ಯಾರ್ಥಿಗಳಿಂದ ಯಕ್ಷಗಾನ ನಡೆಯಿತು.
ಸವ್ಯಸಾಚಿ ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯರ ನಿರ್ದೇಶನದಲ್ಲಿ ಸುಧನ್ವ ಮೋಕ್ಷ ಪ್ರಸಂಗ ಪ್ರಸ್ತುತಿಗೊಂಡಿತು. ಸುಧನ್ವನಾಗಿ ವಿದ್ಯಾ ಕುಂಟಿಕಾನಮಠ, ಪ್ರಭಾವತಿಯಾಗಿ ಶರಣ್ಯ ಕುಂಟಿಕಾನ, ಅರ್ಜುನನಾಗಿ ಶ್ರೀಶ ಕುಮಾರ ಪಂಜಿತ್ತಡ್ಕ, ಶ್ರೀಕೃಷ್ಣನಾಗಿ ಅಮಿತಾ ಪೊಳಲಿ ಪಾತ್ರಗಳಲ್ಲಿ ಮೆರೆದರು. ಭಾಗವತರಾಗಿ ಪ್ರದೀಪ ಕುಮಾರ ಕಂಬಳಪದವು, ಚೆಂಡೆಯಲ್ಲಿ ದಯಾನಂದ ಕೋಡಿಕಲ್, ಮದ್ದಳೆಯಲ್ಲಿ ಸೂರ್ಯನಾರಾಯಣ ಪದಕಣ್ಣಾಯ ಉತ್ತಮ ಹಿಮ್ಮೇಳ ಸಾಥಿ ನೀಡಿದರು. ನೇಪಥ್ಯದಲ್ಲಿ ಮೋಹನ ಕೊಕ್ಕರ್ಣೆ ಸಹಕರಿಸಿದರು.


