ಮುಳ್ಳೇರಿಯ: ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಗುರುವಾರ ಸಂಸ್ಕøತ ದಿನ ಆಚರಿಸಲಾಯಿತು.
ದಿನಾಚರಣೆ ಅಂಗವಾಗಿ ಸಂಸ್ಕೃತ ಸಂಘದ ವಿದ್ಯಾರ್ಥಿಗಳ ನೇತೃತ್ವದಲ್ಲಿ ಶಾಲಾ ಅಸೆಂಬ್ಲಿ ಪ್ರಾರ್ಥನೆಯೊಂದಿಗೆ ಆರಂಭವಾಯಿತು. 9ನೇ ತರಗತಿ ವಿದ್ಯಾರ್ಥಿನಿ ಜಯಲಕ್ಷ್ಮಿ ಸಂಸ್ಕೃತದಲ್ಲಿ ಪ್ರತಿಜ್ಞೆ ಬೋಧಿಸಿದರು. 2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಂಸ್ಕøತ ವಿಷಯದಲ್ಲಿ ಎ ಪ್ಲಸ್ ಶ್ರೇಣಿ ಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಕøತ ಸಂಘದ ವಿದ್ಯಾರ್ಥಿಗಳ ನೇತೃತ್ವದಲ್ಲಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. 9ನೇ ತರಗತಿ ವಿದ್ಯಾರ್ಥಿನಿಯರಾದ ತೇಜಸ್ವಿನಿ ಮತ್ತು ದೀಕ್ಷಿತಾ ಸಂಸ್ಕøತ ಸುಭಾಷಿತ, 8ನೇ ತರಗತಿ ವಿದ್ಯಾರ್ಥಿನಿ ವೈಭವಿ ಸಂಸ್ಕøತ ವಾರ್ತೆ ವಾಚಿಸಿದರು. ವಿದ್ಯಾರ್ಥಿಗಳ ಸಮೂಹಗಾನ, ಸಂಸ್ಕøತ ದಿನಾಚರಣೆ ಪ್ರಯುಕ್ತ ನಡೆಸಿದ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಿತು.
ಹಿರಿಯ ಅಧ್ಯಾಪಕ ಕುಂಞÂ್ಞರಾಮ ಮಣಿಯಾಣಿ ಹಿತ ವಚನ ನುಡಿದರು. ಸಂಸ್ಕೃತ ಶಿಕ್ಷಕ ಮಹೇಶ ಕೃಷ್ಣ ತೇಜಸ್ವಿ ನೇತೃತ್ವವಹಿಸಿದ್ದರು. ಹತ್ತನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ನಿರೂಪಿಸಿದರು. ಅಧ್ಯಾಪಕ ಸಿಬ್ಬಂದಿಗಳು ಸಹಕರಿಸಿದರು.


