ಕಾಸರಗೋಡು: ಶ್ರೀಶಂಕರ ಭಗವದ್ಪಾದರ ಪರಂಪರೆಯಲ್ಲಿ ಅತೀ ಹೆಚ್ಚು ಬಾರಿ ಚಾತುರ್ಮಾಸ್ಯವನ್ನು ಪೂರೈಸುತ್ತಿರುವ ಕೀರ್ತಿಗೆ ಪಾತ್ರರಾಗಿರುವ ಶ್ರೀಮದ್ ಎಡನೀರು ಮಠದ ಶ್ರೀಕೇಶವಾನಂದ ಭಾರತೀ ಶ್ರೀಗಳ ನೇತೃತ್ವದಲ್ಲಿ ಶುಕ್ರವಾರ ಶ್ರದ್ದಾ ಭಕ್ತಿಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ನೆರವೇರಿತು. ರಾತ್ರಿ ಅಘ್ರ್ಯ ಪ್ರದಾನ, ವಿಶೇಷ ಪೂಜಾದಿಗಳು ನೆರವೇರಿದವು.
ಶ್ರೀಮಠದ ಶಾಖಾ ಮಠವಾದ ಬೆಂಗಳೂರಿನ ಶ್ರೀಕೃಷ್ಣ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಳು,ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿತು.



