ಸಮರಸ ಚಿತ್ರ ಸುದ್ದಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ನಿನ್ನೆ ರಾತ್ರಿ ಅಲಂಕೃತಗೊಂಡು ಕಂಗೊಳಿಸಿದ ಬಾಲಗೋಪಾಲಕೃಷ್ಣ.
ಶ್ರೀಕ್ಷೇತ್ರದಲ್ಲಿ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಶುಕ್ರವಾರ ವಿವಿಧ ಕಾರ್ಯಕ್ರಮಗಳು ನೆರವೇರಿತು.ಶ್ರೀದೇವರಿಗೆ ವಿಶೇಷ ಅಲಂಕಾರ,ಪೂಜೆ, ಅಘ್ರ್ಯ ಪ್ರದಾನ ನಡೆಯಿತು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶಂನಾ ಅಡಿಗರಿಂದ ಹರಿಕಥಾ ಸತ್ಸಂಗ, ಬಾಲಗೋಪಾಲಸ್ಪರ್ಧೆ, ಶ್ರೀಕೃಷ್ಣ ಲೀಲೋತ್ಸವ ಮೆರವಣಿಗೆ, ಕೃಷ್ಣ ಲೀಲೋತ್ಸವ, ಮುದ್ದುಕೃಷ್ಣ ವೇಶ ಸ್ಪರ್ಧೆ, ಸಂಜೆ ಬದಿಯಡ್ಕದ ರಂಗಸಿರಿ ತಂಡದಿಂದ ಯಕ್ಷಗಾನ ಬಯಲಾಟ ಪ್ರದರ್ಶನ, ರಾತ್ರಿ ನಾಟ್ಯ ವಿದುಷಿಃ ವಿದ್ಯಾಲಕ್ಷ್ಮೀ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯ ಸಂಭ್ರಮ ನಡೆಯಿತು.ರಾತ್ರಿ 11.50ಕ್ಕೆ ಮಹಾಪೂಜೆಯ ಬಳಿಕ ಅಘ್ರ್ಯ ಪ್ರದಾನ ನೆರವೇರಿತು. ಸಾವಿರಾರು ಭಕ್ತರು ಪಾಲ್ಗೊಂಡರು.


