HEALTH TIPS

ಥಾರ್ ಲಿಂಕ್ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ ಭಾರತ

         
       ನವದೆಹಲಿ: ರಾಜಸ್ಥಾನದ ಜೋಧ್ ಪುರದಿಂದ ಪಾಕಿಸ್ತಾನದ ಕರಾಚಿಗೆ ಸಂಪರ್ಕ  ಕಲ್ಪಿಸುತ್ತಿದ್ದ  ಥಾರ್ ಲಿಂಕ್  ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಭಾರತ ಇಂದು ಸ್ಥಗಿತಗೊಳಿಸಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
    ಇಂದು ಈ ರೈಲು ಸಂಚರಿಸಲಿಲ್ಲ ಎಂದು ವಾಯುವ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಭಯ್ ಶರ್ಮಾ ತಿಳಿಸಿದ್ದಾರೆ.  ಮುಂದಿನ ಆದೇಶದವರೆಗೂ ಈ ರೈಲಿನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
 ಜೋಧ್ ಪುರದ ಭಗತ್ ಕಿ ಕೊತ್ತಿ ರೈಲ್ವೆ ನಿಲ್ದಾಣದಿಂದ ಮುನಾಬಾವೊ ವರೆಗೂ  ಥಾರ್ ಲಿಂಕ್  ಎಕ್ಸ್ ಪ್ರೆಸ್ ರೈಲು ಸಂಚರಿಸುತಿತ್ತು.  ಪಾಕಿಸ್ತಾನಕ್ಕೆ ಹೋಗಲು ಈ ರೈಲಿನಲ್ಲಿ 45 ಜನರು ಟಿಕೆಟ್ ಬುಕ್ ಮಾಡಿದ್ದರು ಎಂದು ವಕ್ತಾರರು ತಿಳಿಸಿದ್ದಾರೆ.
   ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಂಡು ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರ  ಜೋಧ್ ಪುರಕ್ಕೆ ತೆರಳುತ್ತಿದ್ದ ರೈಲನ್ನು ಸ್ಥಗಿತಗೊಳಿಸುತ್ತಿರುವುದಾಗಿ ಪಾಕಿಸ್ತಾನ ರೈಲು ಸಚಿವ ಶೇಕ್ ರಷೀದ್ ಅಹ್ಮದ್ ಆಗಸ್ಟ್ 9 ರಂದು  ಘೋಷಿಸಿದ್ದರು.
   ಇದಕ್ಕೆ ಪ್ರತಿಯಾಗಿ ಇಂದಿನಿಂದ ರಾಜಸ್ಥಾನದ ಜೋಧ್ ಪುರದಿಂದ ಪಾಕಿಸ್ತಾನದ ಕರಾಚಿಗೆ ಸಂಪರ್ಕ  ಕಲ್ಪಿಸುತ್ತಿದ್ದ  ಥಾರ್ ಲಿಂಕ್  ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಇಂದು ಸ್ಥಗಿತಗೊಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries