HEALTH TIPS

ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ-ಪ್ರಾಕೃತಿ ವಿಕೋಪಗಳಂತಹ ಸವಾಲುಗಳ ನಿರ್ವಹಣೆಯಲ್ಲಿ ಒಗ್ಗಟ್ಟು ಅನಿವಾರ್ಯ-ಸಚಿವ ಇ.ಚಂದ್ರಶೇಖರನ್

         
       ಕಾಸರಗೋಡು: ರಾಜ್ಯ ಪ್ರಸ್ತುತ ಎದುರಿಸುತ್ತಿರುವ ಪ್ರಾಕೃತಿಕ ಸವಾಲುಗಳನ್ನು ಎದುರಿಸಿ ಮತ್ತೆ ತಲೆ ಎತ್ತಿ ನಿಲ್ಲುವಲ್ಲಿ ನಮಗೆ ಸಾಧ್ಯವಾಗಬೇಕು.ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಏಕ ಮನಸ್ಸಿನಿಂದ ಒಗ್ಗಟ್ಟಾಗಬೇಕಾದ ಅನಿವಾರ್ಯತೆ ಇದೆ ಎಂದು ರಾಜ್ಯ ಕಂದಾಯ ಸಚಿವರೂ,ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಆದ ಇ.ಚಂದ್ರಶೇಖರನ್ ಅವರು ಕರೆನೀಡಿದರು.
     ರಾಷ್ಟ್ರದ 73ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಿನ್ನೆ ಕಾಸರಗೋಡು ವಿದ್ಯಾನಗರದ ಮುಸಿಪಲ್ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣಗೈದು, ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
               ಪ್ರಾಕೃತಿಕ ದುರಂತದಿಂದ ನಲುಗಿರುವ ರಾಜ್ಯದ ಅತಂತ್ರ ಜನಸಾಮಾನ್ಯರ ಸಂಕಷ್ಟ ನಿವಾರಣೆಯಲ್ಲಿ ನಮ್ಮ ಪಾತ್ರದ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ತುರ್ತು ಈಗಿದೆ. ದುರಂತದಿಂದ ನಲುಗುತ್ತಿರುವವರಿಗೆ ನೆರವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕಿದೆ. ಪ್ರಸ್ತುತ ಉಂಟಾಗಿರುವ ಅತಿವೃಷ್ಠಿ, ಭೂಕುಸಿತಗಳಿಂದ ರಾಜ್ಯದಲ್ಲಿ 100ಕ್ಕೂ ಮಿಕ್ಕಿದ ಜನರು ಜೀವತೆತ್ತಿದ್ದಾರೆ.ಕಳೆದ ವರ್ಷದ ಮಹಾದುರಂತದಲ್ಲಿ 400 ಕ್ಕೂ ಮಿಕ್ಕಿದ ಜನರು ದುರ್ಮರಣಕ್ಕೊಳಗಾಗಿದ್ದಾರೆ. ಸಾವಿರಾರು ಜನರು ಮನೆ-ಮಠಗಳನ್ನು ಕಳಕೊಂಡು ದಿಕ್ಕು ತೋಚದವರಾಗಿದ್ದಾರೆ. ಇಂತಹ ವ್ಯಾಪಕ ಸವಾಲುಗಳನ್ನು ದಾಟಿ ನೆಮ್ಮದಿಯಿಂದ ಬದುಕು ನಿರ್ವಹಿಸಲು ಪ್ರತಿಯೊಬ್ಬ ಸಜ್ಜನ ಪ್ರಜೆಯೂ ಪರಸ್ಪರ ಕೈಜೋಡಿಸುತ್ತಿದ್ದಾರೆ ಎಂದು ಅವರು ಈ ಸಂದರ್ಭ ತಿಳಿಸಿದರು. ಸ್ವತಂತ್ರ ಭಾರತದ ಇತರೆಡೆಗಳಲ್ಲೂ ಹಲವು ದುರಂತಗಳು ಈ ಹಿಂದೆಯೂ ಉಂಟಾಗಿದೆ. 1993ರ ಮಹಾರಾಷ್ಟ್ರದ ಭೂಕಂಪ, 1999ರ ಒರಿಸ್ಸಾದ ಸುಮಟರಗಾಳಿ ದುರಂತ, 2001ರ ಗುಜರಾತ್ ಭೂಕಂಪ,2004ರ ಸುನಾಮಿ ದುರಂತ, 2013ರ ಉತ್ತರಖಂಡ್ ಪ್ರಳಯ, 2014ರ ಕಾಶ್ಮೀರ್ ಪ್ರಳಯ ಮೊದಲಾದ ಸವಾಲುಗಳನ್ನು ರಾಷ್ಟ್ರ ಸಮರ್ಥವಾಗಿ ಎದುರಿಸಿ ಮತ್ತೆ ತಲೆಯೆತ್ತಿ ನಿಂತಿದೆ. ಆದ್ದರಿಂದ ರಾಜ್ಯದ ಇಂದಿನ ಸಂಕಷ್ಟಮಯ ಸ್ಥಿತಿಯಿಂದಲೂ ಮೇಲೆದ್ದು, ಮತ್ತೆ ವ್ಯವಸ್ಥಿತವಾದ ಜೀವನವೊಂದನ್ನು ರೂಪಿಸಲು ಸಾಧ್ಯವಿದೆ ಎಂದು ಅವರು ಭರವಸೆಯ ಮಾತುಗಳನ್ನಾಡಿದರು.
     ರಾಷ್ಟ್ರದ ಸ್ವಾತಂರ್ಯ ಸಂಗ್ರಾಮವು ಈ ನೆಲದ ರಾಷ್ಟ್ರಪ್ರೇಮ, ಒಗ್ಗಟ್ಟಿನ ಸಂಕೇತವಾಗಿ ಯಶಸಸ್ವಿಯಾಗಿ ಹೊರಹೊಮ್ಮಿದೆ. ವಿವಿಧತೆಯಲ್ಲಿ ಏಕತೆ ಎಂಬ ಮಹತ್ವದ ಸಂದೇಶವನ್ನು ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮ ಜಗತ್ತಿಗೆ ತೋರಿಸಿಕೊಡುವಲ್ಲಿ ಮಹತ್ತರವಾಗಿ ಗುರುತಿಸಿಕೊಂಡಿತು. ಸರ್ವವನ್ನೂ ತ್ಯಾಗ ಬಲಿದಾನಗಳ ಮೂಲಕ ಸಮರ್ಪಿಸಿ ರಾಷ್ಟ್ರಹಿತರ ಧ್ಯೇಯದ ಮೂಲಕ ಪಾರತಂತ್ರ್ಯದಿಂದ ಸ್ವಾತಂತ್ರ್ಯ ಗಳಿಸಲು ಸಾಧ್ಯವಾಯಿತು. ಇಂತಹ ಪರಂಪರೆಯ ಧ್ಯೇಯವನ್ನು ಇನ್ನಷ್ಟು ಪ್ರಬಲಗೊಳಿಸಿ ಮುನ್ನಡೆಯುವ ಸನ್ಮನಸ್ಸು ಪ್ರತಿಯೊಬ್ಬರಲ್ಲೂ ಮತ್ತೆ ಮತ್ತೆ ಪುಟಿದೇಳುತ್ತಿರಲಿ ಎಂದು ಅವರು ಸಂದೇಶ ನೀಡಿದರು.
    ಸಂಸದ ರಾಜಮೋಹನ ಉಣ್ಣಿತ್ತಾನ್, ಶಾಸಕರಾದ ಕೆ.ಕುಂ ಞÂ್ಞ ರಾಮನ್, ಎನ್.ಎ.ನೆಲ್ಲಿಕುನ್ನು, ಎಂ.ರಾಜಗೋಪಾಲನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೋಲೀಸ್ ವರಿಷ್ಠ ಜೇಮ್ಸ್ ಜೋಸೆಫ್, ಉಪಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್, ಉಪದಂಡಾಧಿಕಾರಿ ದೇವೀದಾಸ್, ಇತರ ಸಹಾಯಕ ಜಿಲ್ಲಾಧಿಕಾರಿಗಳು, ಪತ್ರಕರ್ತರು, ಶಿಕ್ಷಕರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಮುಖ್ಯಸ್ಥರು, ಉದ್ಯೋಗಿಗಳು, ಸ್ಥಳೀಯಾಡಳಿತ ಘಟಕಗಳ ಅದ್ಯಕ್ಷರು, ಜನಪ್ರತಿನಿಧಿಗಳು,ಪೋಲೀಸ್ ಉದ್ಯೋಗಸ್ಥರು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದರು.
    ದಿನಾಚರಣೆಯ ಅಂಗವಾಗಿ ಎನ್ ಸಿ ಸಿ, ಸ್ಕೌಟ್ಸ್ ಮತ್ತು ಗೈಡ್ಸ್, ವಿದ್ಯಾರ್ಥಿ ಪೋಲೀಸ್, ಸಹಿತ ವಿವಿಧ ಸೇವಾ ವಿಭಾಗಗಳ ಕಾರ್ಯಕರ್ತರು ಭಾಗವಹಿಸಿ ಕವಾಯತು-ಪ್ರದರ್ಶನ ನೀಡಿದರು. ವಿವಿಧ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಈ ಸಂದರ್ಭ ವಿತರಿಸಿ ಗೌರವಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries