ಬದಿಯಡ್ಕ: ಕೇರಳ ಮರಾಟಿ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಮರಾಟಿ ದಿನ 2019 ಕಾರ್ಯಕ್ರಮವು ಸೆ.19ರಂದು ಬದಿಯಡ್ಕ ಶ್ರೀ ಗುರುಸದನದಲ್ಲಿ ನಡೆಯಲಿರುವುದು.
ಅಂದು ಬೆಳಗ್ಗೆ 9.30ಕ್ಕೆ ಕೇರಳ ಮರಾಟಿ ಸಂರಕ್ಷಣ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣ ನಾಯ್ಕ ಪೆಲ್ತಾಜೆ ಧ್ವಜಾರೋಹಣಗೈದು ಮರಾಟಿ ದಿನಕ್ಕೆ ಚಾಲನೆಯನ್ನು ನೀಡಲಿದ್ದಾರೆ. ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. 10.30ರಿಂದ ಸಭಾ ಕಾರ್ಯಕ್ರಮ. ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯ್ಕ ಪೈಕ ಅಧ್ಯಕ್ಷತೆಯನ್ನು ವಹಿಸಲಿದ್ದು, ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕೇರಳ ಟ್ರೈಬಲ್ ಮರಾಟಿ ಫೆಡರೇಶನ್ ರಿ. ಅಧ್ಯಕ್ಷ ಟಿ. ಸುಬ್ರಾಯ ನಾಯ್ಕ, ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಮಂಜುನಾಥ ನಾಯ್ಕ, ಯೂತ್ ಜನರೇಶನ್ ಕ್ಲಬ್‍ನ ಅಧ್ಯಕ್ಷ ರಾಧಾಕೃಷ್ಣ ಮಾಸ್ತರ್, ಕಾಸರಗೋಡು ಡಿವೈಎಸ್‍ಪಿ ಹರಿಶ್ಚಂದ್ರ ನಾಯ್ಕ, ಸರಕಾರಿ ಜನರಲ್ ಆಸ್ಪತ್ರೆಯ ಡಾ| ಸಿ.ಎಚ್.ಜನಾರ್ಧನ ನಾಯ್ಕ, ಕರ್ನಾಟಕ ಕೇರಳ ಟ್ರೈಬಲ್ ಮರಾಟಿ ಫೆಡರೇಶನ್‍ನ ಕಾರ್ಯದರ್ಶಿ ವಿಶ್ವನಾಥ ನಾಯ್ಕ ಬಿ.ಎಸ್., ಕನ್ನಡ ತುಳು ಚಲನಚಿತ್ರ ನಟಿ ಆಶಾ ಸುಜಯ್ ಬೆಂಗಳೂರು, ಕೆಎಂಎಸ್‍ಎ ಕಾರ್ಯದರ್ಶಿ ಹರಿಪ್ರಸಾದ ಪೆರ್ಲ ಶುಭಾಶಂಸನೆಗೈಯಲಿರುವರು. ಪ್ರಧಾನ ಸಂಚಾಲಕ ಶ್ಯಾಮಪ್ರಸಾದ ಮಾನ್ಯ, ನಾರಾಯಣ ನಾಯ್ಕ ಅಡ್ಕಸ್ಥಳ, ಶಶಿಕುಮಾರ್ ಕೆ., ನಾರಾಯಣ ನಾಯ್ಕ ಪರ್ಪಕರಿಯ ಪಾಲ್ಗೊಳ್ಳಲಿರುವರು. ಸಂಜೆ 3 ರಿಂದ ಮರಾಟಿ ಸಮಾಜಬಾಂಧವರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿರುವುದು.

