ಮುಳ್ಳೇರಿಯ: ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮುಖ್ಯಮಂತ್ರಿಯ ದುರಂತ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳ ತಮ್ಮ ದೇಣಿಗೆ ಸಮರ್ಪಿಸಿದರು. ಮುಖ್ಯ ಶಿಕ್ಷಕಿ ವಾರಿಜಾ ನೇರೋಳು, ಸಿಬ್ಬಂದಿ ಕಾರ್ಯದರ್ಶಿ ಮೋಹನನ್, ರಕ್ಷಕ ಶಿಕ್ಷಕ ಸಂಘದ ಸದಸ್ಯ ಹಮೀದ್ ಉಪಸ್ಥಿತರಿದ್ದರು.