ಪೆರ್ಲ:ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಶಾಲೆ ಶಿಕ್ಷಕ ರಕ್ಷಕ ಸಂಘ, ಅಧ್ಯಾಪಕರ ನೇತೃತ್ವದಲ್ಲಿ ಶಿಕ್ಷಕ ದಿನಾಚರಣೆ ಅಂಗವಾಗಿ ಇಬ್ಬರು ನಿವೃತ್ತ ಶಿಕ್ಷಕರ ಮನೆಗೆ ತೆರಳಿ ಅವರನ್ನು ಗೌರವಿಸಲಾಯಿತು.
ಶೇಣಿ ಶಾಲೆಯ ಮುಖ್ಯ ಶಿಕ್ಷಕಿಯಾಗಿ ನಿವೃತ್ತರಾಗಿ, ಇದೀಗ ಎಣ್ಮಕಜೆ ಪಂಚಾಯಿತಿ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿರುವ ಶಾರದ ವೈ. ಹಾಗೂ ಸುಮಾರು 30 ವರ್ಷಗಳ ಕಾಲ ಸಂಜಕಿಲ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ಪೆರ್ಲ ಗುಂಡ್ಯಡ್ಕದಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ರಾಮಚಂದ್ರ ಭಟ್ ಅವರ ಮನೆಗೆ ತೆರಳಿ ತಾಂಬೂಲ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷ ಶ್ರೀಧರ ಪೂಕರೆ, ಮಾತೃ ಮಂಡಳಿ ಅಧ್ಯಕ್ಷೆ ಪ್ರಿಯಾ ಚಾಕಟೆಕುಮೇರಿ, ಗಣಪತಿ ಭಟ್, ಸ್ವರ್ಗ ಶಾಲೆ ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ.ವೈ., ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ., ಶಿಕ್ಷಕರಾದ ಸಚ್ಚಿದಾನಂದ ಮುಗೇರು, ವೆಂಕಟವಿದ್ಯಾ ಸಾಗರ್, ಮಂಜುನಾಥ್, ಮಿಥುನ್ ವಿ.ಆರ್. ಮೊದಲಾದವರು ಉಪಸ್ಥಿತರಿದ್ದರು.


