ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ (ಕೆಎಸ್‍ಪಿಎಸ್) ಬದಿಯಡ್ಕ ಘಟಕದ ಮಹಾಸಭೆಯು ಸೋಮವಾರ ಬದಿಯಡ್ಕ ಶ್ರೀಕುಲಂ ನಿವಾಸದಲ್ಲಿ ಜರಗಿತು.
ಜಿಲ್ಲಾ ಜೊತೆ ಕಾರ್ಯದರ್ಶಿ ಕೇಶವ ಭಟ್ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸೆ. 21ರಂದು ಕಾಸರಗೋಡಿನಲ್ಲಿ ನಡೆಯಲಿರುವ ಜಿಲ್ಲಾ ಸಮ್ಮೇಳನದ ಯಶಸ್ಸಿಗೆ ಕರೆನೀಡಿದರು.
ಘಟಕದ ಅಧ್ಯಕ್ಷ ನಿವೃತ್ತ ಪ್ರಾಂಶುಪಾಲ ಮೈರ್ಕಳ ನಾರಾಯಣ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಂಘಟನೆಯನ್ನು ಬಲಪಡಿಸಿ ಸರ್ಕಾರದಿಂದ ಲಭಿಸಬಹುದಾದ ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳಲು ನಾವೆಲ್ಲ ಒಂದುಗೂಡಬೇಕಿದೆ. ಈ ನಿಟ್ಟಿನಲ್ಲಿ ಸಂಘಟನೆ ಇನ್ನಷ್ಟು ಬಲಗೊಳ್ಳುವ ಕಾರ್ಯಯೋಜನೆ ಸಿದ್ದಪಡಿಸಬೇಕು ಎಂದು ತಿಳಿಸಿದರು.
ಪಿಂಚಣಿದಾರರಾದ ಶಿವಶಂಕರ ಭಟ್ ಗುಣಾಜೆ, ಗೋಪಾಲಕೃಷ್ಣ ಭಟ್ ಕಡಾರು, ಈಶ್ವರ ನಾಯ್ಕ ಪೆರಡಾಲ, ಚೆನ್ನಯ್ಯ ಪೂಜಾರಿ ಮುಚ್ಚಿರ್‍ಕವೆ ಮಾತನಾಡಿದರು. ಜಯಶ್ರೀ ತೊಂಡಮೂಲೆ ಹಾಗೂ ವಿಶಾಲಾಕ್ಷಿ ಕುಳಮರ್ವ ಪ್ರಾರ್ಥನಾ ಶ್ಲೋಕವನ್ನು ಹಾಡಿದರು. ಯೂನಿಟ್ ಕಾರ್ಯದರ್ಶಿ ಕೇಶವ ಪ್ರಸಾದ ಕುಳಮರ್ವ ಸ್ವಾಗತಿಸಿ, ವೆಂಕಟ್ರಮಣ ಭಟ್ ಕೆ.ಎಂ. ವಂದಿಸಿದರು.


