HEALTH TIPS

ಕೊಂಡೆವೂರು ವಿದ್ಯಾಪೀಠದಲ್ಲಿ ಅಜ್ಜ ಅಜ್ಜಿಯಂದಿರ ದಿನ

     
       ಉಪ್ಪಳ: ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ಶಿಶುವಾಟಿಕಾ ವಿಭಾಗದ ನೇತೃತ್ವದಲ್ಲಿ ಗುರುವಾರ ಅಜ್ಜ-ಅಜ್ಜಿಯಂದಿರ ದಿನ ಎಂಬ ವಿಶಿಷ್ಟ ಕಾರ್ಯಕ್ರಮ ಆಚರಿಸಲಾಯಿತು.
    ಶ್ರೀ ನಿತ್ಯಾನಂದ ಯೋಗಾಶ್ರಮದ ಟ್ರಸ್ಟಿ ಮೋಹನದಾಸ್ ಹಾಗೂ ನಿವೃತ್ತ ಶಿಕ್ಷಕಿ ಶ್ಯಾಮಲಾ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಶಾಲೆಯ ಶಿಶುವಾಟಿಕಾ ಮಕ್ಕಳು ತಮ್ಮ ಅಜ್ಜ-ಅಜ್ಜಿಯಂದಿರ ಪಾದಪೂಜೆ ಮಾಡಿ, ಸ್ಮರಣಿಕೆಯನ್ನಿತ್ತು ಆಶೀರ್ವಾದ ಪಡೆದುಕೊಂಡರು. ಮೋಹನದಾಸ್ ಕೊಂಡೆವೂರು ಮುಖ್ಯ ಅತಿತೀಗಳಾಗಿ ಉಪಸ್ಥಿತರಿದ್ದು ಮಾತನಾಡಿ ಅವಿಭಕ್ತಕುಟುಂಬದ ಮಹತ್ವವನ್ನು ವಿವರಿಸಿದರು. ನಿವೃತ್ತ ಶಿಕ್ಷಕಿ ಶ್ಯಾಮಲಾ ವಿವಿಧ ನಿದರ್ಶನಗಳೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಅಜ್ಜ-ಅಜ್ಜಿಯಂದಿರು ನಿರ್ವಹಿಸಬೇಕಾದ ಪಾತ್ರದ ಕುರಿತು ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries