ಮಂಜೇಶ್ವರ: ಆನೆಕಲ್ಲು ಹಳೆ ವಿದ್ಯಾರ್ಥಿ ಸಂಘ ಗ್ರಂಥಾಲಯದಲ್ಲಿ ಓಣಂ ಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಗ್ರಂಥಾಲಯದ ಕಾರ್ಯದರ್ಶಿ ರಾಮಕೃಷ್ಣ ಭಟ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಗ್ರಂಥಪಾಲಕಿ ಸೀತಾ ಸ್ವಾಗತಿಸಿ, ವಂದಿಸಿದರು. ಸಿಹಿಯನ್ನು ಹಂಚಲಾಯಿತು.
..............................................................................................................................................................................................................................................
ಬಾಯಾರಿನ ವೆಬ್ ಸಿಟಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಓಣಂ ಆಚರಣೆ
ಉಪ್ಪಳ: ಬಾಯಾರು ವೆಬ್ ಸಿಟಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಓಣಂ ಆಚರಣೆ ನಡೆಯಿತು. ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆಕರ್ಷಕ ಪೂಕಳಂ ರಚಿಸಿದ್ದರು. ಬೆರಿಪದವು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಕಮಲಾ ಟೀಚರ್ ದೀಪ ಪ್ರಜ್ವಲನ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಅವರು ಓಣಂ ಹಬ್ಬದ ಮಹತ್ವವನ್ನು ಹಾಗೂ ಆಚರಣೆಯ ವಿಧಾನದ ಕುರಿತು ತಿಳಿಸಿದರು. ಮಧ್ಯಾಹ್ನ ವಿಶೇಷ ಭೋಜನ ಓಣ ಸದ್ಯ ಏರ್ಪಡಿಸಲಾಗಿತ್ತು.
................................................................................................................................................................................................................................................
ಅಯ್ಯಪ್ಪ ಭಜನಾ ಮಂದಿರದಲ್ಲಿ ಓಣಂ
ಮಂಜೇಶ್ವರ: ಓಣಂ ಪ್ರಯುಕ್ತ ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಹೂವಿನ ರಂಗೋಲಿ ರಚಿಸಿ ಓಣಂ ಆಚರಿಸಲಾಯಿತು. ನಂತರ ವಿಶೇóಷ ಭಜನಾ ಕಾರ್ಯಕ್ರಮ ಜರಗಿತು.
.................................................................................................................................................................................................................................................
ಕಾಸರಗೋಡು: ಓಣಂ ಹಬ್ಬದ ಅಂಗವಾಗಿ ಪಿಲಿಕುಂಜೆಯ ಮಡಪ್ಪುರ ಶ್ರೀ ಮುತ್ತಪ್ಪನ್ ಕ್ಷೇತ್ರದಲ್ಲಿ ರಚಿಸಿದ ಪೂಕಳಂ.
...................................................................................................................................................................................................................................................
ಮಂಜೇಶ್ವರ: ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಮಕ್ಕಳು ಬಹಳ ಆಸಕ್ತಿಯಿಂದ ತರಗತಿವಾರು ಹೂವಿನ ರಂಗೋಲಿಯನ್ನು ಬಿಡಿಸಿದರು. ಓಣಂ ಹಬ್ಬದ ವಿಶೇಷತೆ ಮತ್ತು ಮಾಹಿತಿಯನ್ನು ನೀಡಲಾಯಿತು.
..........................................................................................................................................................................................................................................................
ವಿವೇಕಾನಂದ ಮಾತೃ ಸಮಿತಿಯಿಂದ ಓಣಂ ಆಚರಣೆ
ಮಧೂರು: ಮಧೂರು ಗ್ರಾಮ ಪಂಚಾಯತಿ ವಿವೇಕಾನಂದ ನಗರದ ಅಂಗನವಾಡಿಯಲ್ಲಿ ವಿವೇಕಾನಂದ ಮಾತೃ ಸಮಿತಿಯ ವತಿಯಿಂದ ಓಣಂ ಹಬ್ಬವನ್ನು ಆಚರಿಸಲಾಯಿತು.
ಪುಟಾಣಿಗಳಿಗೆ ಹಾಗು ಮಾತೆಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮಧೂರು ಗ್ರಾಮ ಪಂಚಾಯತಿ ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷರಾದ ಅವಿನ್ ಎಸ್. ಅವರು ಬಹುಮಾನ ವಿತರಿಸಿದರು. ಮಧ್ಯಾಹ್ನ ಓಣಂ ಸದ್ಯ (ಭೂರಿ ಭೋಜನ) ಏರ್ಪಡಿಸಲಾಗಿತ್ತು.
.................................................................................................................................................................................................................................................................





