ಮಂಜೇಶ್ವರ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‍ನ 2018-19 ನೇ ವರ್ಷದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಜರಗಿತು. 2018-19 ನೇ ವರ್ಷದಲ್ಲಿ ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‍ನಲ್ಲಿ 75.86 ಕೋಟಿ ರೂ. ವ್ಯವಹಾರ ನಡೆದಿರುವುದಾಗಿ ಸಭೆಯಲ್ಲಿ ಉಲ್ಲೇಖಿಸಲಾಯಿತು.
ಸಭೆಯಲ್ಲಿ ಅತಿಥಿಗಳಾಗಿ ಭಾಗವಹಿಸಿದ ವರ್ಕಾಡಿ ಗ್ರಾಮ ಪಂಚಾಯತಿ ಮತ್ತು ಮೀಂಜ ಗ್ರಾಮ ಪಂಚಾಯತಿ ಸದಸ್ಯರಾದ ಸದಾಶಿವ ನಾಯ್ಕ್, ಆನಂದ ತಚ್ಚಿರೆ, ಹೇಮಲತಾ, ಜೆಸಿಂತಾ ಲೋಬೋ, ಪೂರ್ಣಿಮ ಬೇರಿಂಜ, ವಸಂತ ಎಸ್. ಶುಭಾಶಂಸನೆಗೈದರು.
ಸಭೆಯಲ್ಲಿ 2018-19 ನೇ ವರ್ಷದ ಜಮಾ - ಖರ್ಚುಗಳ ಅಂಗೀಕಾರ, ವ್ಯಾಪಾರ ಲೆಕ್ಕ, ಲಾಭ-ನಷ್ಟ ಮತ್ತು ಆಸ್ಥಿ -ಜವಾಬ್ದಾರಿಗಳ ಲೆಕ್ಕ ಪತ್ರವನ್ನು ಮಂಡಿಸಲಾಯಿತು. 2020-21 ರ ಕರಡು ಬಜೆಟ್, 2018-19 ನೇ ವರ್ಷದ ಬಜೆಟ್ ಮಿತಿಗಿಂತ ಜಾಸ್ತಿ ಖರ್ಚಾದ ಹಣಕ್ಕೆ ಅಂಗೀಕಾರವನ್ನು ಪಡೆಯಲಾಯಿತು. 2018-19 ನೇ ವರ್ಷದ ಆಡಿಟ್ ರಿಪೆÇೀರ್ಟ್‍ನ ಮಂಡನೆ ಮತ್ತು ನ್ಯೂನತೆಗಳಿಗೆ ಪರಿಹಾರವನ್ನು ತಿಳಿಸಿ, ಪಾಲು ಬಂಡವಾಳ ರೂ.100 ಕ್ಕಿಂತ ಕಡಿಮೆ ಇದ್ದವರ ಹೆಸರನ್ನು ಪ್ರತ್ಯೇಕಿಸಲು ಮತ್ತು ಹಳೆಯದಾದ ಮತ್ತು ಉಪಯೋಗ ಶೂನ್ಯವಾದ ವಸ್ತುಗಳನ್ನು ತೆರವು ಗೊಳಿಸುವುದಕ್ಕೆ ಅಂಗೀಕಾರವನ್ನು ಪಡೆಯಲಾಯಿತು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ ದಿವಾಕರ್ ಎಸ್. ಅವರು ಮಾತನಾಡಿ, ಬ್ಯಾಂಕಿನ ಅಭಿವೃದ್ಧಿ ಬಗ್ಗೆ ತಿಳಿಸಿ ಸಭೆಯಿಂದ ಬಂದ ಪ್ರಶ್ನೆಗಳಿಗೆ ಉತ್ತರಿಸಿದರು. ಹಿರಿಯ ಸದಸ್ಯ ಶ್ರೀಪತಿ ರಾಯ ಸಲಹೆ ಸೂಚನೆಗಳನ್ನು ನೀಡಿದರು. ಮಾಜಿ ನಿರ್ದೇಶಕ ತಾರಮತಿ ಆಳ್ವ, ಬಳ್ಳು ಹಾಗು ವೃತ್ತಿಯಿಂದ ನಿವೃತ್ತಿಯಾದ ಅಂಗನವಾಡಿ ಅಧ್ಯಾಪಿಕೆ ಶಾರದ ರಾವ್ ಅವರನ್ನು ಮಹಾಸಭೆಯಲ್ಲಿ ಗೌರವಿಸಲಾಯಿತು.
ಸಿಬ್ಬಂದಿಗಳಾದ ದಯಾವತಿ, ಜೀವನ್, ಆರತಿ, ಅನೀಶ್, ದೀಪಾ, ರಾಜೇಶ್, ಶೈಲಜಾ, ಜಯಂತ, ನಾರಾಯಣ ನಾಯ್ಕ್ ಮತ್ತು ನಿರ್ದೇಶಕರಾದ ಅಬ್ದುಲ್ಲ, ಮಹಮ್ಮದ್ ಇಕ್ಬಾಲ್, ರಾಜೇಶ್ ಡಿ'ಸೋಜ, ಸೀತಾರಾಮ ಬೇರಿಂಜ, ಸೀತಾರಾಮ ಪೂಜಾರಿ, ಜಯಾ, ಕಮಲಾಕ್ಷಿ, ಸುನಿತಾ ಡಿ'ಸೋಜ ಸಹಕರಿಸಿದರು. ಬ್ಯಾಂಕ್‍ನ ಕಾರ್ಯದರ್ಶಿ ಶ್ರೀವತ್ಸ ಭಟ್ ಸ್ವಾಗತಿಸಿ, ನಿರ್ದೇಶಕ ಬಿಫಾತಿಮ ವಂದಿಸಿದರು.