ಕಾಸರಗೋಡು: ಕಾಸರಗೋಡಿನ ಜೆ.ಪಿ. ನಗರ ಕನ್ನಡ ಗ್ರಾಮದಲ್ಲಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಮೈಸೂರಿನ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಜಂಟಿ ಆಶ್ರಯದಲ್ಲಿ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಸಹಕಾರದಲ್ಲಿ ಕಾಸರಗೋಡು ಜಿಲ್ಲಾ 5ನೇ ಚುಟುಕು ಸಾಹಿತ್ಯ ಸಮ್ಮೇಳನವು ಸೆ.29ರಂದು ಬೆಳಗ್ಗೆ 8ರಿಂದ ನಡೆಯಲಿದೆ.
ಬೆಳಿಗ್ಗೆ 8ರಿಂದ 10ರ ತನಕ ಕಾಸರಗೋಡು ದಸರಾ ಮಹಿಳಾ ದಾಸ ಸಂಕೀರ್ತನ ವೈಭವ ನಡೆಯಲಿದೆ. ಬೆಳಿಗ್ಗೆ 9ರಿಂದ ನಡೆಯುವ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯನ್ನು ಮಧೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ದಿವಾಕರ ಆಚಾರ್ಯ ಉದ್ಘಾಟಿಸುವರು. ಕಾಸರಗೋಡು ಕೌನ್ಸಿಲರ್ ಶಂಕರ ಕೆ. ಅವರು ರಾಷ್ಟ್ರಧ್ವಜ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವರಾಮ ಕಾಸರಗೋಡು ಚುಟುಕು ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಮಾಡುವರು.
ಸಮ್ಮೇಳನವನ್ನು ಹಿರಿಯ ಸಿನೆಮಾ ಪತ್ರಕರ್ತ ಗಣೇಶ ಕಾಸರಗೋಡು ಉದ್ಘಾಟಿಸುವರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕ ಪ್ರದರ್ಶನ, ಬೆಂಗಳೂರಿನ ವೀರೇಶ್ ರುದ್ರಸ್ವಾಮಿ ಅವರ ಕಲಾ ಪ್ರದರ್ಶನವನ್ನು ದಕ್ಷಿಣ ಕನ್ನಡ ಕಸಾಪ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ ಕಲ್ಕೂರ ಉದ್ಘಾಟಿಸುವರು. ವ್ಯಂಗ್ಯಚಿತ್ರ ಪ್ರದರ್ಶನವನ್ನು ಹಿರಿಯ ಪತ್ರಕರ್ತ ಡಾ.ಶೇಖರ ಅಜೆಕಾರು ಉದ್ಘಾಟಿಸುವರು. ಕಾಸರಗೋಡು ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಅವರು ವಿವಿಧ ನೂತನ ಕೃತಿಗಳನ್ನು ಬಿಡುಗಡೆ ಮಾಡುವರು. ಸಭೆಯಲ್ಲಿ ಮೈಸೂರಿನ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್.ಅರಸ್, ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಡಾ.ರತ್ನಾ ಹಾಲಪ್ಪ ಗೌಡ, ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಸುಜಾತಾ ಎಂ, ನಿವೃತ್ತ ಯೋಧ ತಾರಾನಾಥ ಬೋಳಾರ, ವಕೀಲ ಥೋಮಸ್ ಡಿ'ಸೋಜಾ, ಅಧ್ಯಾಪಕ ವಿಶಾಲಾಕ್ಷ ಪುತ್ರಕಳ, ಇರಾ ನೇಮು ಪೂಜಾರಿ, ಪಿ.ರಾಮಚಂದ್ರ ಭಟ್, ಕೆ.ವಾಮನ್ ರಾವ್ ಬೇಕಲ್, ಪ್ರೇಮಾ ಎಲ್ಲೋಜಿ ರಾವ್, ಹಮೀದ್ ಹಸನ್ ಮಾಡೂರು, ಬಿ.ಬಾಲಕೃಷ್ಣ ಅಗ್ಗಿತ್ತಾಯ, ಎನ್.ಎ.ರಮೇಶ್ ಕೈಗಾ, ಪುರುಷೋತ್ತಮ ಎಂ.ನಾೈಕ್, ಕೆ.ಗುರುಪ್ರಸಾದ್ ಕೋಟೆಕಣಿ, ಲೋಕೇಶ್ ಮೀಪುಗುರಿ, ಪತ್ರಕರ್ತ ಹಾಜಿ ಎಸ್.ಅಬೂಬಕ್ಕರ್ ಅರ್ಲಪದವು ಭಾಗವಹಿಸುವರು.
ಈ ಸಂದರ್ಭದಲ್ಲಿ ಅಂಚೆ ಕಾರ್ಡ್ ಕಥಾ ಸ್ಪರ್ಧೆ ಹಾಗೂ ಚುಟುಕು ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮಧ್ಯಾಹ್ನ 12ರಿಂದ ಕೆ. ಸೃಷ್ಟಿ ಶೆಟ್ಟಿ ಕಾಟುಕುಕ್ಕೆ ಅವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಮಕ್ಕಳ ಚುಟುಕು ಕವಿಗೋಷ್ಠಿ ಹಾಗೂ ಮಧ್ಯಾಹ್ನ 1ರಿಂದ ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕ ಡಾ.ಸ್ವಾಮಿ ಕೋಡಿಹಳ್ಳಿ ಅಧ್ಯಕ್ಷತೆಯಲ್ಲಿ ಅಂತರ್‍ರಾಜ್ಯ ಚುಟುಕು ಕವಿಗೋಷ್ಠಿ ನಡೆಯಲಿದೆ. ಅಪರಾಹ್ನ 2.30ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದ ನಿರ್ದೇಶಕ ಡಾ.ರಾಜೇಶ್ ಬೆಜ್ಜಂಗಳ ಸಮಾರೋಪ ಭಾಷಣ ಮಾಡಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆ ಶಿವರಾಮ ಕಾಸರಗೋಡು ವಹಿಸಲಿದ್ದಾರೆ. ಡಾ.ಸುರೇಶ್ ನೆಗಳಗುಳಿ ಅವರ ಪಡುಗಡಲ ತೆರೆಮಿಂಚು ಗಝಲ್ ಕೃತಿಗೆ 2018ರ ಸಾಲಿನ ವಿಶೇಷ ಕೃತಿ ಪುರಸ್ಕಾರ ನೀಡಲಾಗುವುದು. ಈ ಸಂದರ್ಭದಲ್ಲಿ ಮಂಜೇಶ್ವರ ಗೋವಿಂದ ಪೈ ಹಾಗೂ ನಾಡೋಜಾ ಡಾ.ಕಯ್ಯಾರ ಕಿಂಞಣ್ಣ ರೈ ಅವರ ರಚನೆಗಳ ಕಾವ್ಯಗಾಯನ ನಡೆಯಲಿದೆ.


