ಉಪ್ಪಳ: ಗಾಯತ್ರಿ ವಿಶ್ವಕರ್ಮ ಮಹಿಳಾ ಭಜನಾ ಸಂಘ ಪ್ರತಾಪನಗರ ಇದರ ಪ್ರಥಮ ವಾರ್ಷಿಕೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮ ಗಾಯತ್ರಿ ಮಂದಿರದಲ್ಲಿ ಇತ್ತೀಚೆಗೆ ವಿಶ್ವಕರ್ಮ ಪೂಜಾ ಮಹೋತ್ಸವದ ಸಂದರ್ಭದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಭಜನಾ ಸಂಘದ ಅಧ್ಯಕ್ಷೆ ಲಲಿತಾ ಭಾಸ್ಕರ ಆಚಾರ್ಯ ವಹಿಸಿದರು. ಮಂದಿರದ ಅಧ್ಯಕ್ಷ ಶಿವಾನಂದ ಆಚಾರ್ಯ ದೀಪಬೆಳಗಿಸಿ ಉದ್ಘಾಟಿಸಿದರು. ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಹರ್ಷೇಂದ್ರ ಆಚಾರ್ಯ, ಗಾಯತ್ರಿ ಮಹಿಳಾ ಸಂಘದ ಅಧ್ಯಕ್ಷೆ ಜಯಮಾಧವ ಆಚಾರ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಭಜನಾ ಗುರುಗಳಾದ ಪುಳ್ಕೂರು ಮೋಹನ ಆಚಾರ್ಯರಿಗೆ ಗುರುವಂದನೆ ನಡೆಸಲಾಯಿತು. ವಿಶ್ವನಿಕೇತನ ಶಿಶು ವಿದ್ಯಾಕೇಂದ್ರ ಪ್ರತಾಪನಗರ ಇದರ ಪುಟಾಣಿಗಳಾದ ಲಕ್ಷ್ಮಿ, ವೃಷಭ್, ಯಶ್ವಿನ್ ಪ್ರಾರ್ಥನೆ ಹಾಡಿದರು. ರೇಣುಕಾ ನಾಗೇಶ್ ಆಚಾರ್ಯ ಸ್ವಾಗತಿಸಿ, ಶಶಿಕಲಾ ಲೋಹಿತಾಕ್ಷ ಆಚಾರ್ಯ ವರದಿ ಮಂಡಿಸಿದರು. ಕು.ಭಾರತಿ ವಂದಿಸಿದರು. ಭಾಸ್ಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವದಂಗವಾಗಿ ಗಣಪತಿ ಹೋಮ, ವಿಶ್ವಕರ್ಮ ಹೋಮ, ಮಹಾಪೂಜೆ, ಸೂರ್ಯಾಸ್ತಮಾನದಿಂದ ಮರು ದಿನ ಸೂರ್ಯೋದಯದವರೆಗೆ ವಿವಿಧ ತಂಡಗಳಿಂದ ಭಜನೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

