ಬದಿಯಡ್ಕ: ಕೇರಳ ಮರಾಟಿ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಮರಾಟಿ ದಿನಾಚರಣೆ- 2019 ಇಂದು (ಸೆ.19) ಬದಿಯಡ್ಕದ ಗುರುಸದನದಲ್ಲಿ ಜರಗಲಿರುವುದು. ಬೆಳಿಗ್ಗೆ 9.30 ಕ್ಕೆ ಕೇರಳ ಮರಾಟಿ ಸಂರಕ್ಷಣಾ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಣ ನಾಯ್ಕ ಪೆಲ್ತಾಜೆ ಧ್ವಜಾರೋಹಣಗೈಯ್ಯುವರು. 10.30 ರಿಂದ ಕೇರಳ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಪೈಕ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ. ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ- ಕೇರಳ ಟ್ರೈಬಲ್ ಮರಾಟಿ ಫೆಡರೇಶನ್‍ನ ಅಧ್ಯಕ್ಷ ಟಿ. ಸುಬ್ರಾಯ ನಾಯ್ಕ, ಕರ್ನಾಟಕ- ಕೇರಳ ಟ್ರೈಬಲ್ ಮರಾಟಿ ಫೆಡರೇಶನ್‍ನ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ, ಯೂತ್ ಜನರೇಶನ್ ಕ್ಲಬ್‍ನ ಅಧ್ಯಕ್ಷ ರಾಧಾಕೃಷ್ಣ ಮಾಸ್ತರ್, ಕಾಸರಗೋಡು ಡಿವೈಎಸ್‍ಪಿ ಹರಿಶ್ಚಂದ್ರ ನಾಯ್ಕ, ಕಾಸರಗೋಡು ಸರ್ಕಾರಿ ಆಸ್ಪತ್ರೆಯ ಡಾ. ಸಿ.ಎಚ್ ಜನಾರ್ಧನ ನಾಯ್ಕ, ಕರ್ನಾಟಕ- ಕೇರಳ ಟ್ರೈಬಲ್ ಮರಾಟಿ ಫೆಡರೇಶನ್‍ನ ಕಾರ್ಯದರ್ಶಿ ವಿಶ್ವನಾಥ ನಾಯ್ಕ ಬಿ.ಎಸ್., ಕನ್ನಡ, ತುಳು ಚಲನ ಚಿತ್ರ ನಟಿ ಆಶಾ ಸುಜಯ್ ಬೆಂಗಳೂರು, ಕ.ಎಂ.ಎಸ್.ಎ. ಕಾರ್ಯದರ್ಶಿ ಹರಿಪ್ರಸಾದ್ ಪೆರ್ಲ ಮೊದಲಾದವರು ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ 2018-19 ನೇ ಶೈಕ್ಷಣಿಕ ವರ್ಷದ 10 ನೇ ತರಗತಿ, ಪ್ಲಸ್ ಟು, ಹಾಗೂ ಕ್ರೀಡೆಗಳಲ್ಲಿ ಪ್ರಶಸ್ತಿ ಪಡೆದವರನ್ನು ಅಭಿನಂದಿಸಲಾಗುವುದು. ಸಂಜೆ 3 ರಿಂದ ಸಮಾಜ ಬಾಂಧವರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಲಿರುವುದು.
ಗುರುಸದನದಲ್ಲಿ ಇಂದು ಮರಾಟಿ ದಿನಾಚರಣೆ- 2019
0
ಸೆಪ್ಟೆಂಬರ್ 19, 2019