ಉಪ್ಪಳ: ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಮಾತ್ರವಲ್ಲದೆ ಪಾರಂಪರಿಕ ಕುಡಿಯುವ ನೀರಿನ ಮೂಲಗಳನ್ನು ಸಂರಕ್ಷಿಸಬೇಕಿದೆ ಎಂದು ಕಾಸರಗೋಡು ಜಿ.ಪಂ ಸದಸ್ಯೆ ಪುಷ್ಪಾ ಅಮೆಕ್ಕಳ ಹೇಳಿದರು.
ಬಾಯಾರು ಸಮೀಪದ ಆವಳಮಠ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಪರಿಸರದಲ್ಲಿ ನಡೆದ ಸ್ವಚ್ಛತಾ ಸಪ್ತಾಹ ಮತ್ತು ಕೇಂದ್ರ ಸರಕಾರದ ಸ್ವಚ್ಛತಾ ಹಿ ಸೇವಾ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲೂ ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಸಮಸ್ಯೆ ಉಲ್ಬಣಿಸುತ್ತಿದೆ. ಈ ನಿಟ್ಟಿನಲ್ಲಿ ಪಾರಂಪರಿಕ ನೀರಿನ ಮೂಲಗಳ ಸದ್ಬಳಕೆಯ ಅವಶ್ಯಕತೆ ಇದೆ ಎಂದರು. ಗ್ರಾಮ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಜಲ ಸಂರಕ್ಷಣೆಗೂ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಗಣಪತಿ ಭಟ್ ಆವಳಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ಗ್ರಾ.ಪಂ. ಸದಸ್ಯ ಆಟಿಕುಕ್ಕೆ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಕೇಂದ್ರ ಸರಕಾರದ ಸ್ವಚ್ಛತಾ ಹಿ ಸೇವಾ ಯೋಜನೆಯ ಬಗ್ಗೆ ವಿವರಿಸಿ, ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರಸಾದ್ ದೈತೋಟ, ನಾರಾಯಣ ನಾಯಕ್ ದೈತೋಟ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಾಜಿ ಗ್ರಾ.ಪಂ. ಸದಸ್ಯ ಐತ್ತಪ್ಪ ಪಂಜ, ಕುಟುಂಬಶ್ರೀ ವನಿತಾ ಘಟಕದ ಸದಸ್ಯರು ಉಪಸ್ಥಿತರಿದ್ದರು. ಸುಂದರಿ ಎನ್. ವಂದಿಸಿದರು.