ಮಂಜೇಶ್ವರ: ರೂಪಕಲಾ ಗ್ರಂಥಾಲಯ ಸುಳ್ಯಮೆಯಲ್ಲಿ ಗ್ರಂಥಾಲಯ ದಿನದ ಅಂಗವಾಗಿ ಅಕ್ಷರ ದೀಪ ಕಾರ್ಯಕ್ರಮ ನಡೆಯಿತು.
ಗ್ರಂಥಾಲಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದು ವರ್ಕಾಡಿ ಗ್ರಾಮ ಪಂಚಾಯತಿ ಸದಸ್ಯೆ ಗೀತಾ ವಿ.ಸಾಮಾನಿ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಸಿಆರ್‍ಪಿಎಫ್ ಯೋಧ ದಿನಕರ ಕೋಟ್ಯಾನ್, ನಿವೃತ್ತ ಶಾರೀರಿಕ ಶಿಕ್ಷಕರಾದ ಬಿ.ಚಂದ್ರಶೇಖರ ರೈ, ಗ್ರಂಥಾಲಯದ ಪೆÇೀಷಕ ಸದಸ್ಯರುಗಳಾದ ವಸಂತ ರಾಜ್ ಸಾಮಾನಿ ಮತ್ತು ದಿಲೀಪ್ ರೈ, ರೂಪಕಲಾ ಮಹಿಳಾ ಮಂಡಲದ ಕಾರ್ಯದರ್ಶಿ ರಮ್ಯ ಶೆಟ್ಟಿ, ರೂಪಕಲಾ ಕರ್ಷಕ ಸಮಿತಿಯ ರವೀಂದ್ರ ಶೆಟ್ಟಿ ಬಾಳೆಹಿತ್ತಿಲು, ಶಿಕ್ಷಕಿ ಆಶಾ ದಿಲೀಪ್, ಗ್ರಂಥಾಲಯದ ಸದಸ್ಯರು ಮತ್ತು ರೂಪಕಲಾ ಬಾಲವೇದಿಕೆಯ ಸದಸ್ಯರು ಉಪಸ್ಥಿತರಿದ್ದರು. ಗ್ರಂಥಾಲಯದ ಕಾರ್ಯದರ್ಶಿ ರವೀಂದ್ರ ಮಾಂಡೇಲು ಸುಳ್ಯಮೆ ಸ್ವಾಗತಿಸಿ, ಗ್ರಂಥಪಾಲಕಿ ವಿಜಯ ಶೆಟ್ಟಿ ವಂದಿಸಿದರು.


