ಮಧೂರು: ಗಡಿನಾಡಿನ ಹೆಮ್ಮೆಯ ಸಾಂಸ್ಕøತಿಕ ಕಲಾ ಸಂಸ್ಥೆ `ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ' ಸಂಸ್ಥೆಯು ಕನ್ನಡ ನಾಟ್ಯರಂಗ ಹೈದರಾಬಾದ್ ಸಂಸ್ಥೆಯ ಸಹಯೋಗದೊಂದಿಗೆ ಸೆಪ್ಟಂಬರ್ 22ರಿಂದ 29ರವರೆಗೆ ಹೈದರಾಬಾದ್ ನಗರದ ವಿವಿಧ ಸ್ಥಳಗಳಲ್ಲಿ ಎಂಟು ದಿನಗಳ ಕಾಲ ಪ್ರತೀ ದಿನ ಸಂಜೆ 6 ರಿಂದ `ಯಕ್ಷಾಷ್ಟಕಂ' ಶೀರ್ಷಿಕೆಯಡಿಯಲ್ಲಿ ಯಕ್ಷಗಾನ ಪ್ರದರ್ಶನ ನೀಡಲಿದೆ. ಪ್ರದರ್ಶನಕ್ಕೆ ಸ್ಥಳೀಯ ಹಲವು ಯಕ್ಷಗಾನ ಪ್ರೇಮಿ ಸಂಘ ಸಂಸ್ಥೆಗಳು ಪ್ರಾಯೋಜಕತ್ವ ನೀಡಲಿದೆ.
ತಂಡದಲ್ಲಿ ಭಾಗವತರಾಗಿ ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ದಿನೇಶ್ ಭಟ್ ಯಲ್ಲಾಪುರ, ಚಂಡೆ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಮದ್ದಳೆ ಲವಕುಮಾರ್ ಐಲ, ಚಕ್ರತಾಳ ನಿಶ್ವತ್ ಹಾಗೂ ಮುಮ್ಮೇಳದಲ್ಲಿ ರಾಧಾಕೃಷ್ಣ ನಾವಡ ಮಧೂರು, ಗುಂಡಿಮಜಲು ಗೋಪಾಲ ಭಟ್, ಶಂಭಯ್ಯ ಭಟ್ ಕಂಜರ್ಪಣೆ, ವಿಷ್ಣು ಶರ್ಮ ವಾಟೆಪಡ್ಪು, ಮಹೇಶ್ ಮಣಿಯಾಣಿ ದೊಡ್ಡತೋಟ, ಸುಬ್ರಹ್ಮಣ್ಯ ಭಟ್ ಪೆರುವೋಡಿ, ಶಶಿಕಿರಣ ಕಾವು, ರಾಜೇಶ್ ನಿಟ್ಟೆ, ಪ್ರಕಾಶ್ ನಾಯಕ್ ನೀರ್ಚಾಲು, ರಕ್ಷಿತ್ ರೈ ದೇಲಂಪಾಡಿ, ಅಕ್ಷಯ, ದಿನೇಶ, ಶ್ರೀಮುಖ ಭಾಗವಹಿಸಲಿದ್ದು, ಶ್ರೀ ಗಣೇಶ ಕಲಾ ವೃಂದ ಪೈವಳಿಕೆ ಸಂಸ್ಥೆ ವೇಷಭೂಷಣ ಪೂರೈಸಲಿದ್ದಾರೆ.

