ಪೆರ್ಲ:ಶಬರಿಮಲೆ ಸೇವಾ ಸಮಾಜ ನೇತೃತ್ವದಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಸೆಪ್ಟಂಬರ್, ಅಕ್ಟೋಬರ್ ತಿಂಗಳಲ್ಲಿ ನಡೆಯುವ ಅಯ್ಯಪ್ಪ ಧರ್ಮ ಪ್ರಚಾರ ರಥ ಯಾತ್ರೆ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಿಂದ ಪ್ರಜ್ವಲಿಸಿದ ದೀಪ ಜ್ಯೋತಿಯೊಂದಿಗೆ ಹೊರಟಿದ್ದು ಪ್ರಚಾರ ರಥಯಾತ್ರೆಯ ರಾಜ್ಯ ಮಟ್ಟದ ಉದ್ಘಾಟನೆ ಉದ್ಯಾವರ ಮಾಡ ದೇವಸ್ಥಾನದ ಪರಿಸರದಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ಬಾಮೀಜಿ ದೀಪ ಬೆಳಗಿ ರಥಯಾತ್ರೆಗೆ ಬುಧವಾರ ಚಾಲನೆ ನೀಡಿರುವರು.
ರಥಯಾತ್ರೆ ಸೆ.29ರಂದು ಪೆರ್ಲ ಪ್ರವೇಶಿಸಲಿದ್ದು ಅಯ್ಯಪ್ಪ ಪ್ರಚಾರ ಯಾತ್ರೆ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ, ಅಯ್ಯಪ್ಪ ಧರ್ಮ ಪ್ರಚಾರ ರಥಯಾತ್ರೆ ಸ್ವಾಗತ ಸಮಿತಿ ಎಣ್ಮಕಜೆ ಪೆರ್ಲ ನೇತೃತ್ವದಲ್ಲಿ ಪೆರ್ಲ ಅಶ್ವತ್ಥಕಟ್ಟೆ ಪರಿಸರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗ್ಗೆ 10ಕ್ಕೆ ಖ್ಯಾತ ದಾಸ ಸಂಕೀರ್ತನೆಕಾರ ರಾಮಕೃಷ್ಣ ಕಾಟುಕುಕ್ಕೆ ಅವರಿಂದ ದೀಪ ಪ್ರಜ್ವಲನೆ, 10ರಿಂದ ಬಜಕೂಡ್ಲು ಶ್ರೀ ಅಯ್ಯಪ್ಪ ಸ್ವಾಮೀ ಮಹಿಳಾ ಸಂಘ, ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಭಜನಾ ಸಮಿತಿ, ಸ್ಥಳೀಯರ ಭಜನೆ 11.30ಕ್ಕೆ ಇಡಿಯಡ್ಕದಿಂದ ಭವ್ಯ ಸ್ವಾಗತ, ಮಧ್ಯಾಹ್ನ 1ಗಂಟೆಗೆ ಪೆರ್ಲ ಶ್ರೀಸತ್ಯನಾರಾಯಣ ಮಂದಿರದಲ್ಲಿ ದೇವರಿಗೆ ಅರ್ಚನೆ, ಮಹಾ ಮಂಗಳಾರತಿ, ಅನ್ನ ಸಂತರ್ಪಣೆ, ಮಧ್ಯಾಹ್ನ 2.30ರಿಂದ ಸಾಮಾಜಿಕ ಕಾರ್ಯಕರ್ತೆ ಶ್ಯಾಮಲಾ ಪತ್ತಡ್ಕ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ.ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲ ಜಯರಾಮ ರೈ ಕಾಟುಕುಕ್ಕೆ ಧಾರ್ಮಿಕ ಉಪನ್ಯಾಸ ನೀಡುವರು. ಖ್ಯಾತ ಯಕ್ಷಗಾನ ಕಲಾವಿದ ರವಿ ಅಲೆವೂರಾಯ ವರ್ಕಾಡಿ ಮುಖ್ಯ ಭಾಷಣ ಮಾಡಲಿದ್ದು, ಕಾಸರಗೋಡು ಜಿಲ್ಲಾ ಬೈರ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಕುರೆಡ್ಕ, ಎಣ್ಮಕಜೆ ಅಯ್ಯಪ್ಪ ಧರ್ಮ ಪ್ರಚಾರ ರಥಯಾತ್ರೆ ಸ್ವಾಗತ ಸಮಿತಿ ಅಧ್ಯಕ್ಷ ರವಿಚಂದ್ರ ಸೂರ್ಡೇಲು ಉಪಸ್ಥಿತರಿರುವರು.
30ರಂದು ಬೆಳ್ಳೂರಿಗೆ:
ಧರ್ಮ ಪ್ರಚಾರ ರಥಯಾತ್ರೆಯು ಸೆ. 30ರಂದು ಸಂಜೆ 3 ಗಂಟೆಗೆ ಬೆಳ್ಳೂರು ನಾಟೆಕಲ್ಲಿನಲ್ಲಿ ಭ್ಯವ್ಯ ಸ್ವಾಗತದೊಂದಿಗೆ ಅಯ್ಯಪ್ಪ ಭಜನಾ ಮಂದಿರ ಪ್ರವೇಶಿಸಲಿದೆ. ಬೆಳ್ಳೂರು ಗ್ರಾಮ ಪಂಚಾಯಿತಿ ಸ್ವಾಗತ ಸಮಿತಿ ನೇತೃತ್ವದಲ್ಲಿ ಮಧ್ಯಾಹ್ನ 2ರಿಂದ ಭಜನೆ, ಮಹಾ ಮಂಗಳಾರತಿ, ಸಂಜೆ 5ಕ್ಕೆ ಬೆಳ್ಳೂರು ಶ್ರೀ ಮಹಾವಿಷ್ಣು ದೇವಳದ ಮಹಾದ್ವಾರದಲ್ಲಿ ಸ್ವಾಗತ, 6ಕ್ಕೆ ಬೆಳ್ಳೂರು ಪಂಚಾಯಿತಿ ಸ್ವಾಗತ ಸಮಿತಿ ಅಧ್ಯಕ್ಷ ಗಂಗಾಧರ ಬಲ್ಲಾಳ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಧಾರ್ಮಿಕ ಭಾಷಣ ಮಾಡುವರು. ಸಮಿತಿ ಗೌರವಾಧ್ಯಕ್ಷ ವಿ.ಎಸ್. ಸುಬ್ರಹ್ಮಣ್ಯ ಕಡಂಬಳಿತ್ತಾಯ, ಉಪಾಧ್ಯಕ್ಷ ಶ್ರೀಧರ ಎಂ., ಬೆಳ್ಳೂರು ಮಹಾವಿಷ್ಣು ದೇವಳ ಗೌರವ ಸಲಹೆಗಾರ ಚಂದ್ರಶೇಖರ ರಾವ್ ಕಲ್ಲಗ, ಶಾಂತಪ್ಪ ಗುರುಸ್ವಾಮಿ, ನಾಟೆಕಲ್ಲು ಅಯ್ಯಪ್ಪ ಭಜನಾ ಮಂದಿರ ಅಧ್ಯಕ್ಷ ವಿಠಲ ಶೆಟ್ಟಿ ಜಿ., ರಥಯಾತ್ರೆ ಸಮಿತಿ ಖಜಾಂಚಿ ರವೀಂದ್ರನಾಥ ರೈ ಮಿತ್ತಮಜಲು, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಪಿ., ರಮೇಶ್ ಆಚಾರ್ಯ ನಾಟೆಕಲ್ಲು ಉಪಸ್ಥಿತರಿರುವರು. ರಾತ್ರಿ 7ರಿಂದ ರಥದಲ್ಲಿ ಪೂಜಾ ಕಾರ್ಯಕ್ರಮ, 8ಕ್ಕೆ ಶ್ರೀ ಮಹಾವಿಷ್ಣು ದೇವಳದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.