HEALTH TIPS

ಭರತನಾಟ್ಯ ಕ್ಷೇತ್ರದ ಅಪ್ರತಿಮ ಸಾಧಕ ಸತ್ಯನಾರಾಯಣ ರಾಜು ಅವರಿಂದ ಬದಿಯಡ್ಕದಲ್ಲಿ 4ದಿನಗಳ ತರಬೇತಿ ಕಾರ್ಯಾಗಾರ

   
      ಬದಿಯಡ್ಕ: ಸ್ತ್ರೀಯರಿಂದಲೇ ಆಳಲ್ಪಡುವ ಭಾರತೀಯ ಭರತನಾಟ್ಯ ಕ್ಷೇತ್ರದಲ್ಲಿ ಅಪ್ರತಿಮ ಪುರುಷ ಕಲಾವಿದನಾದ ಬೆಂಗಳೂರು ಸತ್ಯನಾರಾಯಣರಾಜು ಓರ್ವ ನೃತ್ಯ ಕಲಾವಿದ ಹಾಗೂ ನಿರ್ದೇಶಕನಾಗಿಯೂ ಪ್ರಸಿದ್ಧಿ ಹೊಂದಿದ್ದಾರೆ. ಹಲವಾರು ಅಡೆತಡೆಗಳ ನಡುವೆಯೂ ತಮ್ಮ ಸಾಧನೆ ಹಾಗೂ ಕಠಿಣ ಶ್ರಮ, ತಲ್ಲೀನತೆಗಳಿಂದಾಗಿ ಭರತನಾಟ್ಯ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
     ಸಂಗೀತ ನಾಟಕ ಅಕಾಡಮಿ ಪುರಸ್ಕøತ ಶಕುಂತಲಾ ನಾಟ್ಯಾಲಯದ ಗುರು ನರ್ಮದಾ,  ಶುಭದ್ರಾ ಪ್ರಭು ಇವರಿಂದ ಭರತನಾಟ್ಯದ ವಿವಿಧ ಪ್ರಕಾರಗಳನ್ನು ಅಭ್ಯಸಿಸಿದಲ್ಲದೆ ಡಾ. ಮಾಯಾ ರಾವ್ ಹಾಗೂ ಚಿತ್ರಾ ವೇಣುಗೋಪಾಲ್ ಇವರಿಂದ ಕಥಕ್ ಕಲೆಯನ್ನು ಸಂಕ ಕರಗತಗೊಳಿಸಿದ್ದಾರೆ.
1966 ಜನವರಿ 6ರಂದು ಕೃಷಿ ಕುಟುಂಬಕ್ಕೆ ಸೇರಿದ ಮತ್ತು ವ್ಯಾಯಾಮ ಪಟು ಆಗಿದ್ದಂತಹ ದಿವಂಗತ ಶ್ರೀ ಮುನಿಸ್ವಾಮಿ ರಾಜು ಮತ್ತು ಶ್ರೀಮತಿ ಮುನಿಯಮ್ಮ ಇವರ ಸುಪುತ್ರನಾಗಿ ಜನಿಸಿದ ಸತ್ಯನಾರಾಯಣ ರಾಜು ಅವರು ತನ್ನ ಕುಟುಂಬದಲ್ಲಿ ನಾಟ್ಯ ಕಲೆಯ ಯಾವುದೇ ಹಿನ್ನಲೆ ಇಲ್ಲದಿದ್ದರೂ, ಬಹಳಷ್ಟು ಅಡೆತಡೆಗಳನ್ನು ಎದುರಿಸಿ, ತನ್ನ ಛಲ ಹಾಗೂ ಸಂಮಯ ಮಮತೆಯಿಂದ ನೃತ್ಯದಲ್ಲಿ ಸಾಧನೆ ಗೈದು ದಿನದಿಂದ ದಿನಕ್ಕೆ ಭರತನಾಟ್ಯ ಕ್ಷೇತ್ರದಲ್ಲಿ ಪ್ರಸಿದ್ಧಿ ಹೊಂದಿದ್ದಾರೆ.
      ದೂರದರ್ಶನದ `ಎ' ಟೋಪ್ ಗ್ರೇಡ್ ಕಲಾವಿದರಾದ ಸತ್ಯನಾರಾಯಣ ರಾಜು ಅವರು ರಾಷ್ಟ್ರೀಯ ದೂರದರ್ಶನ ಚ್ಯಾನೆಲ್‍ನಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಭೀಮಸೇನ್ ಜೋಷಿ ಮತ್ತಿತರ ವಿದಗ್ಧ ಕಲಾವಿದರೊಂದಿಗೆ ರಾಷ್ಟ್ರೀಯ ಐಕ್ಯತೆಯನ್ನು ಸಾರುವ `ಮಿಲೇ ಸುರ್ ಮೇರಾ ತುಮ್ಹಾರಾ' ಗಾನದಲ್ಲಿ ಭಾಗವಹಿಸಿದ್ದಾರೆ. ಇವರ ಎಲ್ಲಾ ಕಾರ್ಯಕ್ರಮಗಳು ಭಾರತದಾದ್ಯಾಂತ ಹೆಸರುಗಳಿಸಿದ್ದಲ್ಲದೆ, ಇಂಗ್ಲೆಂಡ್, ಅಮೇರಿಕಾ, ಸ್ವಿಝರ್‍ಲ್ಯಾಂಡ್, ಕೆನಡಾ, ಫ್ರಾನ್ಸ್, ಮಾಲ್ಡೋವ್ರ್ ಮತ್ತು ಸಿಂಗಾಪುರಗಳಲ್ಲಿಯೂ ಪ್ರಖ್ಯಾತಿ ಹೊಂದಿದೆ.
    ಸತ್ಯನಾರಾಯಣ ರಾಜು ಅವರ ಎಲ್ಲಾ ಪ್ರದರ್ಶನಗಳಲ್ಲಿ ಭರತನಾಟ್ಯದ ಪ್ರಕಾರಗಳಾದ ನೃತ್ಯ, ನೃತ್ತ, ಅಭಿನಯ ಮತ್ತು ಚಲನೆಗಳ ನೈಪುಣ್ಯತೆಗಳನ್ನು ಕಾಣಬಹುದು. ರಂಗಮಂಟಪದಲ್ಲಿ ಸತ್ಯನಾರಾಯಣ ಅವರ ಅಪ್ರತಿಮ ಅಭಿನಯ ಪ್ರೇಕ್ಷಕರನ್ನು ಮಂತ್ರಮುಗ್ಧರಾಗಿಸುತ್ತದೆ. ಇವರು ನೃತ್ಯಪಟು ಮಾತ್ರವಲ್ಲದೆ, ಉತ್ತಮ ಗುರು ಹಾಗೂ ನಿರ್ದೇಶಕರಾಗಿಯೂ ಪ್ರಸಿದ್ಧಿ ಹೊಂದಿದ್ದಾರೆ. ಅವರ ಸಂಸ್ಥೆಯಾದ ಬೆಂಗಳೂರಿನ `ಸಂಸ್ಕøತಿ ಕಲೆಯ ಆಲಯ'ದಲ್ಲಿ ಹಲವಾರು ವಿದ್ಯಾರ್ಥಿಗಳನ್ನು ಪಳಗಿಸುತ್ತಿದ್ದಾರೆ. ಅವರ ವಿಶಿಷ್ಟ ಕೋರಿಯೋಗ್ರಾಫಿ ವಿಧಾನವು, ಹಲವಾರು ಹೃದಯಗಳನ್ನು ಗೆದ್ದಿದೆ. ಅವರು ಭಾರತದಾದ್ಯಂತ ಹಲವಾರು ನೃತ್ಯಕಾರ್ಯಾಗಾರ, ಕಮ್ಮಟಗಳನ್ನು ನಡೆಸಿದ ಅನುಭವವನ್ನು ಹೊಂದಿದ್ದಾರೆ. ಅಲ್ಲದೆ, ರಾಷ್ಟ್ರೀಯ ನೃತ್ಯೋತ್ಸವಗಳನ್ನು ಅಯೋಜಿಸಿದ್ದಾರೆ.
      ಇವರ ಏಕವೃತ್ತಿ ಪ್ರದರ್ಶನವಾದ `ರಾಮಕಥಾ'ಯು ಭಾರತದಾದ್ಯಂತ ಅಲ್ಲದೆ, ವಿದೇಶಗಳಲ್ಲಿಯೂ, ಹೆಸರುಗಳಿಸಿದೆ. ವಿವಿಧ ಪತ್ರಿಕೆಗಳಲ್ಲಿ, ದಿನಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಇವರು ಅಂಕಣಗಾರರಾಗಿಯೂ, ಪ್ರಸಿದ್ಧಿ ಹೊಂದಿದ್ದಾರೆ.
       ಸತ್ಯನಾರಾಯಣ ಅವರು ಪ್ರಪಂಚದಾದ್ಯಂತ ಯುವ ಪ್ರತಿಭೆಗಳನ್ನು ಪ್ರೋತ್ಸಾಯಿಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ರಾಷ್ಟ್ರೀಯ ನೃತ್ಯೋತ್ಸವಗಳನ್ನು ಏರ್ಪಡಿಸುತ್ತಾ ಯುವ ಪೀಳಿಗೆಯಲ್ಲಿ ಸುಪ್ತವಾಗಿರುವಂತಹ ನೃತ್ಯದ ವಿವಿಧ ರೂಪಗಳನ್ನು ಹೊರತರುವಲ್ಲಿ ಶ್ರಮಿಸುತ್ತಿದ್ದಾರೆ. ಅವರು ಅನಿವಾಸಿ ಭಾರತೀಯ ಕಲಾವಿದರನ್ನು ಸಂಕ ಈ ನೃತ್ಯೋತ್ಸವಗಳಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ. ಇದಲ್ಲದೆ `ಸಂಸ್ಕøತಿ' ಮತ್ತು `ಶಿವರಾತ್ರಿ ಉತ್ಸವಗಳು' ಇತ್ಯಾದಿ ಕಾರ್ಯಕ್ರಮಗಳ ಅಯೋಜನೆಯಲ್ಲಿ ಅವರ ಅಪ್ರತಿಮ ಅಯೋಜನಾ ಚಾಕಚಕ್ಯತೆಯನ್ನು ಕಾಣಬಹುದು.
       ಪ್ರಶಸ್ತಿಗಳು : 
    2016-17ರ ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ "ಕರ್ನಾಟಕ ಕಲಾಶ್ರೀ", ಚೆನ್ನೈಯ ನಾಟ್ಯಾಂಜಲಿ ಟ್ರಸ್ಟ್‍ನ "ನರ್ತಕ" ಪ್ರಶಸ್ತಿ, 2015ರಲ್ಲಿ "ದೂರದರ್ಶನ ಚಂದನ" ಪ್ರಶಸ್ತಿ, 2017ರಲ್ಲಿ ನಾರದ ಗಾನ ನಾಟ್ಯರಂಗಂನ ಒಬುಲ್ ರೆಡ್ಡಿ ಎಂಡೋಮೆಂಟ್ ಪ್ರಶಸ್ತಿ ಮೊದಲಾದ ಅನೇಕ ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದಾರೆ.
        ಬದಿಯಡ್ಕದಲ್ಲಿ ತರಬೇತಿ :
      ಬದಿಯಡ್ಕ ಪದ್ಮಶ್ರೀ ಟ್ಯಟೋರಿಯಲ್ಸ್‍ನ ನೇತೃತ್ವದಲ್ಲಿ ಸೆ.12 ರಿಂದ 15ರ ವರೆಗೆ ಪ್ರತೀದಿನ ಅಪರಾಹ್ನ 2ರಿಂದ 6ರ ತನಕ ಬದಿಯಡ್ಕ ನವಜೀವನ ರಸ್ತೆಯಲ್ಲಿರುವ ಶ್ರೀ ರಾಮಲೀಲಾ ಸಭಾಂಗಣದಲ್ಲಿ ಸತ್ಯನಾರಾಯಣ ರಾಜು ಅವರು ಭರತನಾಟ್ಯ ತರಬೇತಿ ಕಾರ್ಯಾಗಾರವು ನಡೆಯಲಿರುವುದು. ಆಸಕ್ತಿರಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕ 9447855962 ಸಂಖ್ಯೆ ಸಂಪರ್ಕಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries