ಕಾಸರಗೋಡು: ರಾಜ್ಯ ಕೃಷಿ ಅಭಿವೃದ್ಧಿ, ಕೃಷಿ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ವತಿಯಿಂದ ಜಾರಿಗೊಳಿಸುವ `ಪಾಠ ಒಂದು ಗದ್ದೆಗೆ' ಎಂಬ ಹೆಸರಿನ ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಾಟನೆ ಚೆಂಗಳ ಗ್ರಾಮಪಂಚಾಯತ್‍ನ ಪಾಡಿ ಗದ್ದೆಯಲ್ಲಿ ಜರಗಿತು.
ಭತ್ತದ ಬೀಜ ಬಿತ್ತುವ ಮೂಲಕ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನ ಕೃಷಿ ಅ„ಕಾರಿ ಮಧು ಜೋರ್ಜ್ ಮತ್ತಾಯಿ ಅಧ್ಯಕ್ಷತೆ ವಹಿಸಿದ್ದರು.
ಅದ್ರುಗುಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಎಡನೀರು ಹೈಯರ್ ಸೆಕೆಂಡರಿ ಶಾಲೆ, ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು. ಅದ್ರುಗುಳಿ ಶಾಲೆಯ ರಕ್ಷಕ-ಶಿಕ್ಷ ಸಂಘದ ಅಧ್ಯಕ್ಷ ಅಬೂಬಕ್ಕರ್ ನೇತೃತ್ವ ವಹಿಸಿದ್ದರು. ಕೃಷಿ ಡೆಪ್ಯೂಟಿ ಡೈರೆಕ್ಟರ್ ಪಿ.ಪಿ.ಉಮೆಶ್, ಕಾಸರಗೋಡು ಆತ್ಮಾ ಯೋಜನೆ ನಿರ್ದೇಶಕಿ ಎಸ್.ಸುಷ್ಮಾ, ಕೃಷಿ ಡೆಪ್ಯೂಟಿ ಡೈರೆಕ್ಟರ್ ಜೋನ್ ಜೋಸೆಫ್, ಕೃಷಿ ಸಹಾಯಕ ನಿರ್ದೇಶಕ ಕೆ.ಆನಂದ್, ಚೆಂಗಳ ಕೃಷಿ ಅ„ಕಾರಿ ಎಸ್.ಎಸ್.ಸಜು, ಮಧು ಪ್ರಶಾಂತ್, ಪರಮೇಶ್ವರ ಆಯ್ಕ್, ಸುಜನಿ ಟೀಚರ್, ಗದ್ದೆ ಸ್ಥಿತಿ ಸಂಚಾಲಕ ಸುರೇಶ್ ಉಪಸ್ಥಿತರಿದ್ದರು. ಪಿ.ವಿ.ಕೃಷ್ಣನ್ ವಂದಿಸಿದರು.
ಪಾಲಾಯಿಯಲ್ಲಿ `ಪಾಠ ಒಂದು ಗದ್ದೆಗೆ' : ರಾಜ್ಯ ಕೃಷಿ ಅಭಿವೃದ್ಧಿ, ಕೃಷಿ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ವತಿಯಿಂದ ಜಾರಿಗೊಳಿಸುವ `ಪಾಠ ಒಂದು ಗದ್ದೆಗೆ' ಎಂಬ ಹೆಸರಿನ ಕಾರ್ಯಕ್ರಮ ಪಾಲಾಯಿ ಗದ್ದೆಯಲ್ಲಿ ಜರಗಿತು.
ನೀಲೇಶ್ವರ ಕೃಷಿ ಭವನದ ನೇತೃತ್ವದಲ್ಲಿ ಸ್ಥಳೀಯ ಅನುದಾನಿತ ಶಾಲೆಯ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಕಾರ್ಯಕ್ರಮ ಅಂಗವಾಗಿ ಕೃಷಿ ಉಪಕರಣಗಳ ಪ್ರದರ್ಶನ ನಡೆಯಿತು. ಕೃಷಿ ಅಧಿಕಾರಿ ಕೆ.ಪಿ.ರೇಷ್ಮಾ ಪ್ರತಿಜ್ಞೆ ಬೋಧಿಸಿದರು. ಹಿರಿಯ ಕೃಷಿಕರೊಂದಿಗೆ ಮಕ್ಕಳು ಸಂವಾದ ನಡೆಸಿದರು. ಜಾನಪದ ಹಾಡುಗಳ ಆಲಾಪನೆ ಜರಗಿತು. ಸಹಾಯಕ ಕೃಷಿ ಅಧಿಕಾರಿ ಪಿ.ಪಿ.ಪ್ರಕಾಶನ್, ಮುಖ್ಯ ಶಿಕ್ಷಕ ಕೆ.ಪಿ.ರಾಜೀವನ್, ಶಿಕ್ಷಕರಾದ ಎಂ.ವಿ.ಮಧು ಮೊದಲಾದವರು ನೇತೃತ್ವ ವಹಿಸಿದ್ದರು. ಸ್ಥಳೀಯ ಗದ್ದೆ ಸಮಿತಿ, ತರಕಾರಿ ಕ್ಲಸ್ಟರ್ ಕೃಷಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.


