ಕಾಸರಗೋಡು: ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಅ.12ರಂದು ರಾಷ್ಟ್ರೀಯ ಲೋಕ ಅದಾಲತ್ ಕಾಸರಗೋಡು ಜಿಲ್ಲಾ ನ್ಯಾಯಾಲಯ ಸಮುಚ್ಛಯದಲ್ಲಿ ಜರಗಲಿದೆ.
ಅಂದು ದೇಶದ ಎಲ್ಲ ನ್ಯಾಯಾಲಯಗಳಲ್ಲಿ ನಡೆಯುವ ಅದಾಲತ್‍ಗಳ ಅಂಗವಾಗಿ ಜಿಲ್ಲೆಯಲ್ಲೂ ನಡೆಯಲಿದೆ ಎಂದು ತಿಳಿಸಲಗಿದೆ.
ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಇರುವ ಮಾತುಕತೆ ಮೂಲಕ ಬಗೆಹರಿಯಬಲ್ಲ ಪ್ರಕರಣಗಳನ್ನು ಪರಿಶೀಲಿಸಲಾಗುವುದು. ಅಮಾನ್ಯ ಚೆಕ್, ಮೋಟಾರು ವಾಹನ, ಕಾರ್ಮಿಕರ, ವಿದ್ಯುತ್-ನೀರು ಶುಲ್ಕ, ಸೇವೆಗಳಿಗೆ ಇತ್ಯಾದಿ ಸಂಬಂಧಿಸಿದ ಪ್ರಕರಣಗಳನ್ನು ಅದಾಲತ್‍ನಲ್ಲಿ ಪರಿಶೀಲಿಸಲಾಗುವುದು. ನ್ಯಾಯಾಲಯಗಳಲ್ಲಿ ಇರುವ ಈ ಸಾಲಿಗೆ ಸೇರುವ ಪ್ರಕರಣಗಳನ್ನು ಈ ಅದಾಲತ್‍ನಲ್ಲಿ ಬಗೆಹರಿಸಲು ಇಚ್ಛಿಸುವವರು ತಮ್ಮ ನ್ಯಾಯವಾದಿಗಳ ಮೂಲಕ ಸಂಪರ್ಕಿಸಬಹುದಾಗಿದೆ. ಮೋಟಾರು ವಾಹನ ಕಾಯಿದೆಗಳಿಗೆ ಸಂಬಂಧಪಟ್ಟ ಕೇಸುಗಳಲ್ಲಿ ಈಗಾಗಲೇ ಸಂಬಂಧಪಟ್ಟವರಿಗೆ ನೋಟೀಸು ಕಳುಹಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ಸಹಿತ ಹಣಕಾಸು ಸಂಸ್ಥೆಗಳು ಕಾನೂನು ಸೇವಾ ಪ್ರಾ„ಕಾರಕ್ಕೆ ಅರ್ಜಿ ಸಲ್ಲಿಸಿವೆ. ಸಂಬಂಧಪಟ್ಟವರು ಕ್ಲಪ್ತ ಸಮಯಕ್ಕೆ ಹಾಜರಾಗುವಂತೆ ಕಾನೂನು ಸೇವಾ ಪ್ರಾ„ಕಾರದ ಅಧ್ಯಕ್ಷ, ಜಿಲ್ಲಾ ನ್ಯಾಯ ಮೂರ್ತಿಗಳು ಮತ್ತು ಕಾರ್ಯದರ್ಶಿ, ಉಪ ನ್ಯಾಯಮೂರ್ತಿಗಳ ಪರವಾಗಿ ಸೆಕ್ಷನ್ ಅ„ಕಾರಿ ದಿನೇಶ್ ಕೊಡಂಗೆ ಪ್ರಕಟಣೆಯಲ್ಲಿ ತಿಳಿಸಿದರು. ಮಾಹಿತಿಗೆ ಕಾಸರಗೋಡು ಕಾನೂನು ಸೇವಾ ಪ್ರಾ„ಕಾರ ಕಚೇರಿ(ದೂರವಾಣಿ ಸಂಖ್ಯೆ-04998-256189)ಯನ್ನು ಸಂಪರ್ಕಿಸಬಹುದು.


