ಕಾಸರಗೋಡು: ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಕೈಗಾರಿಕೆ ಪ್ರಬಲೀಕರಣ ಅಂಗವಾಗಿ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಉದ್ಯಮಿಗಳಿಗಾಗಿ ಜನರಲ್ ಎಂಜಿನಿಯರಿಂಗ್ ಎಂಬ ವಿಷಯದಲ್ಲಿ ಎರಡು ದಿನಗಳ ತಾಂತ್ರಿಕ ಕಾರ್ಯಾಗಾರ ನಡೆಯಲಿದೆ.
ನವೆಂಬರ್ ತಿಂಗಳ ಮೊದಲ ವಾರ ಕಾಂಞಂಗಾಡ್‍ನಲ್ಲಿ ಈ ಕಾರ್ಯಾಗಾರ ಜರಗಲಿದೆ. ಕೈಗಾರಿಕಾ ರಂಗದಲ್ಲಿ ತಲೆದೋರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅತ್ಯಾಧುನಿಕ ರೀತಿಗಳನ್ನು ಅರಿತುಕೊಳ್ಳುವುದು, ನೂತನ ಯಂತ್ರಗಳ ಸಹಿತ ತಂತ್ರಜ್ಞಾನದ ಕುರಿತು ಮಾಹಿತಿ ನೀಡುವುದು ಇತ್ಯಾದಿಗಳ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುವುದು.
ಕಾರ್ಯಾಗಾರದಲ್ಲಿ ಪ್ರವೇಶಾತಿ ಉಚಿತವಾಗಿರುವುದು. ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್‍ನ ಪರಿಣತರು ತರಗತಿ ನಡೆಸುವರು. ಆಸಕ್ತರು ಹೊಸದುರ್ಗ ತಾಲೂಕು ಕೈಗಾರಿಕಾ ಕಚೇರಿಯಲ್ಲಿ ಮುಂಗಡವಾಗಿ ಹೆಸರು ನೋಂದಣಿ ನಡೆಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: 9495615930 ಸಂಪರ್ಕಿಸಬಹುದು.

