ಕಾಸರಗೋಡು: ವಿವಿಧ ವಲಯಗಳಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಚೈಲ್ಡ್ ಲೈನ್ ಸಲಹಾ ಸಮಿತಿ ಸಭೆ ತಿಳಿಸಿದೆ.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆಗಳು ಜತೆಸೇರಿ ಈ ಸಂಬಂಧ ಕಾರ್ಯಾಚರಣೆ ನಡೆಸಿದರೆ ಹೆಚ್ಚುವರಿ ಪರಿಣಾಮಕಾರಿಯಾದೀತು ಎಂದು ಸಭೆ ಅಭಿಪ್ರಾಯಪಟ್ಟಿದೆ. ಶಿಕ್ಷಣ, ಪೆÇಲೀಸ್, ಅಬಕಾರಿ, ಸಾಮಾಜಿಕ ನ್ಯಾಯ, ಡಿ.ಡಿ.ಒ.ಪಿ., ಪರಿಶಿಷ್ಟ ಜಾತಿ-ಪಂಗಡ ಇಲಾಖೆಗಳ ಜಂಟಿ ವತಿಯಿಂದ ಮುಂದೆ ಚೈಲ್ಡ್‍ಲೈನ್ ಚಟುವಟಿಕೆ ನಡೆಸಲಿದೆ. ಈ ಸಂಬಂಧ 30 ಮಂದಿಗೆ ವಿಶೇಷ ತರಬೇತು ನೀಡಲಾಗುವುದು ಎಂದು ತಿಳಿಸಲಾಗಿದೆ.
ಅನೇಕ ಪ್ರಕರಣಗಳಲ್ಲಿ ಸಂಕಷ್ಟಕ್ಕೀಡಾದ ಮಕ್ಕಳ ಸಂರಕ್ಷಣೆಗೆ ಚೈಲ್ಡ್ ಲೈನ್ ನಡೆಸಿದ ಚಟುವಟಿಕೆಗಳು ಯಶಸ್ವಿಯಾಗಿದೆ ಎಂದು ಸಭೆ ಅವಲೋಕನ ನಡೆಸಿದೆ. ಜಿಲ್ಲೆಯಲ್ಲಿ ಅತ್ಯ„ಕ ಪೀಡನೆಗಳಿಗೆ ಒಳಗಾದ ಮಕ್ಕಳು ನಗರಸಭೆ ಮತ್ತು ಚೆಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯವರು ಎಂದು ಸಭೆ ಆತಂಕ ವ್ಯಕ್ತಪಡಿಸಿದೆ.
ಶಾಲೆಗಳಲ್ಲಿ ಅರ್ಹರಾದವರನ್ನು ಮಾತ್ರ ಕೌನ್ಸಿಲಿಂಗ್ ನಡೆಸಲು ಆಯ್ಕೆಮಾಡಬೇಕು. ಮಕ್ಕಳು ಅಪರಿಚಿತರೊಂದಿಗೆ ಬೈಕ್ ಸಹಿತ ವಾಹನಗಳಲ್ಲಿ ಲಿಫ್ಟ್ ಯಾಚಿಸುವುದು, ಸಂಚಾರ ನಡೆಸಕೂಡದು. ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸಿ ತೆರಳುವ ಪ್ರಕರಣಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಶಾಲೆಗಳ ಬಳಿಯ ಅಂಗಡಿಗಳಲ್ಲಿ ಮಾದಕ ಪದಾರ್ಥಗಳ ಮಾರಾಟ ವಿರುದ್ಧ ತಪಾಸಣೆ ನಡೆಸಬೇಕು ಎಂದು ಸಭೆ ಸಲಹೆ ಮಾಡಿದೆ.
ಸಹಾಯಕ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ಪ್ರಷೋಬ್, ಚೈಲ್ಡ್ ಲೈನ್ ಜಿಲ್ಲಾ ಸಂಚಾಲಕ ಅನೀಷ್ ಜೋಸ್, ಸಿ.ಡಬ್ಲ್ಯೂ.ಸಿ. ಅಧ್ಯಕ್ಷೆ ಪಿ.ಪಿ.ಶ್ಯಾಮಲಾದೇವಿ, ಶಿಕ್ಷಣ ಉಪ ನಿರ್ದೇಶಕಿ ಕೆ.ಎನ್.ಪುಷ್ಪಾ, ಚೈಲ್ಡ್‍ಲೈನ್ ಸಂಚಾಲಕರಾದ ಎಂ.ಉದಯಕುಮಾರ್, ಕೆ.ವಿ.ಲಿಷಾ, ಡಿ.ಸಿ.ಪಿ.ಒ. ಸಿ.ಎ. ಬಿಂದು, ಚೈಲ್ಡ್ ಸೆಂಟರ್ ನಿರ್ದೇಶಕಿ ಎ.ಎ.ಅಬ್ದುಲ್ ರಹಮಾನ್ ಮೊದಲಾದವರು ಉಪಸ್ಥಿತರಿದ್ದರು.


