HEALTH TIPS

ಅಪ್ರಾಪ್ತ ವಯಸ್ಕ ಮಕ್ಕಳ ಮೇಲಿನ ದೌರ್ಜನ್ಯ- ಜಿಲ್ಲೆಯಲ್ಲಿ ಇನ್ನೂ ಉಳಿದುಕೊಂಡಿದೆ ಕಪ್ಪುಚುಕ್ಕಿ

 
      ಕಾಸರಗೋಡು: ಅಪ್ರಾಪ್ತ ವಯಸ್ಕ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕಾಸರಗೋಡು ಜಿಲ್ಲೆ ಇಂದಿಗೂ ಕಪ್ಪು ಚುಕ್ಕಿಯ ಕುಖ್ಯಾತಿಯನ್ನು ಉಳಿಸಿಕೊಂಡಿದೆ ಎಂಬುದು ಆತಂಕಕಾರಿ ವಿಚಾರ.
ಹೆಣ್ಣು ಮಕ್ಕಳ ಮೇಲೆ ಅತ್ಯ„ಕ ಪ್ರಮಾಣದಲ್ಲಿ ಪೀಡನೆಗಳು ನಡೆದರೆ, ಕೆಲವೆಡೆ ಗಂಡುಮಕ್ಕಳೂ ಈ ಪಿಡುಗಿಗೆ ಈಡಾಗುತ್ತಿದ್ದಾರೆ ಎಂಬುದು ಜಿಲ್ಲೆಗೆ ಸಂಬಂಧಿಸಿ ನಡೆಸಲಾದ ಸಮೀಕ್ಷೆಗಳ ಅಂಕಿಅಂಶಗಳು ಪ್ರಕಟಪಡಿಸುತ್ತಿವೆ. 
      ಮಕ್ಕಳ ಸಂರಕ್ಷಣೆಗೆ ಅಹೋರಾತ್ರಿ ದುಡಿಯುತ್ತಿರುವ ಸರಕಾರಿ ಸಂಸ್ಥೆ ಚೈಲ್ಡ್‍ಲೈನ್‍ನ ದಾಖಲೆಗಳ ಪ್ರಕಾರ 2018-19(ಈ ವರೆಗೆ) ಈ ಸಾಲಿಗೆ ಸೇರಿದ ಒಟ್ಟು 109 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 86 ಅಪ್ರಾಪ್ತವಯಸ್ಕ ಹೆಣ್ಣುಮಕ್ಕಳು ಲೈಂಗಿಕ ದಬ್ಬಾಳಿಕೆಗೆ ಈಡಾದರೆ, 23 ಪ್ರಾಯ ಪೂರ್ತಿಗೊಳ್ಳದ ಗಂಡುಮಕ್ಕಳೂ ಬಲಿಪಶುಗಳಾಗಿದ್ದಾರೆ. 2017-18ನೇ ಇಸವಿಯಲ್ಲಿ ಒಟ್ಟು 111 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ ಅಪ್ರಾಪ್ತ ವಯಸ್ಕರಾದ 88 ಹೆಣ್ಣುಮಕ್ಕಳು, 23 ಗಂಡುಮಕ್ಕಳು ಪೀಡನೆಗೆ ಒಳಗಾಗಿದ್ದರು ಎಂದು ದಾಖಲೆಗಳು ಸೂಚಿಸುತ್ತವೆ.
     ಅತಿ ಹೆಚ್ಚಿನ ದೌರ್ಜನ್ಯದ ಆರೋಪಿಗಳು ಸಂಬಂ„ಕರು : ಸಂಬಂ„ಕರಿಂದಲೇ ಅತಿ ಹೆಚ್ಚಿನ ಪೀಡನೆ ಮಕ್ಕಳ ಮೇಲೆ ನಡೆಯುತ್ತಿದೆ ಎಂದು ಅಂಕಿಅಂಶಗಳು ಸೂಚಿಸುತ್ತಿವೆ. ಈ ವರ್ಷ 26 ಪ್ರಕರಣಗಳು ಸಂಬಂಧಿಕರಿಂದ ನಡೆದಿರುವ ಬಗ್ಗೆ ಪ್ರಕರಣಗಳ ದಾಖಲಾತಿ ಖಚಿತಪಡಿಸುತ್ತಿದೆ.
     ನಂತರದ ಆರೋಪಿಗಳ ಸಾಲಿನಲ್ಲಿ ಶಾಲಾ ಶಿಕ್ಷಕರು ನಿಲ್ಲುತ್ತಾರೆ ಎಂದು ಅಂಕಿಅಂಶಗಳ ಪಟ್ಟಿ ತಿಳಿಸಿದೆ. ಜಿಲ್ಲೆಯಲ್ಲಿ ಈ ವರ್ಷ ಒಟ್ಟು 23 ಪ್ರಕರಣಗಳು ಈ ನಿಟ್ಟಿನಲ್ಲಿ ದಾಖಲಾಗಿವೆ. ನೆರೆಮನೆಯವರಿಂದ ಮಕ್ಕಳು ಲೈಂಗಿಕ ಪೀಡನೆಗೊಳಗಾದ 19 ಪ್ರಕರಣಗಳು ದಾಖಲಾಗಿವೆ. ಅಪರಿಚಿತರಿಂದ, ಸಹಪಾಠಿಗಳಿಂದ ಹೀಗೆ ಬೇರೆ ಬೇರೆ ವ್ಯಕ್ತಿಗಳಿಂದ ದಬ್ಬಾಳಿಕೆಗೆ ಒಳಗಾದ 13 ಪ್ರಕರಣಗಳೂ ಇವೆ. 
      ಹೆತ್ತವರೇ `ವಿಲನ್' ಗಳಾದರೆ... : ಸಾಧಾರಣ ಗತಿಯಲ್ಲಿ ಮಲತಂದೆಯಿಂದ (ಅಪರೂಪದ ಪ್ರಕರಣಗಳಲ್ಲಿ ಮಲತಾಯಿಯಿಂದ) ಮಕ್ಕಳು ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾರೆ ಎಂಬ ವದಂತಿ ಸಮಾಜದಲ್ಲಿ ಹರಡಿಕೊಂಡಿದೆ. ಆದರೆ ಚೈಲ್ಡ್‍ಲೈನ್‍ನ ಮೂಲಕ ದಾಖಲಾಗಿರುವ ಪ್ರಕರಣಗಳನ್ನು ಗಮನಿಸಿದಾಗ ಸ್ವಂತ ಹೆತ್ತವರಿಂದಲೇ ಲೈಂಗಿಕ ಪೀಡನೆಗೊಳಗಾದ ಪ್ರಕರಣಗಳು ಅ„ಕವಾಗಿರುವುದು ಬೆಳಕಿಗೆ ಬಂದಿದೆ. ಒಟ್ಟು 12 ಪ್ರಕರಣಗಳು ಈ ವರ್ಷ ಸ್ವಂತ ತಂದೆಯಿಂದಲೇ ನಡೆದ ಲೈಂಗಿಕ ದೌರ್ಜನ್ಯ ನಿಟ್ಟಿನಲ್ಲಿ ದಾಖಲಾಗಿವೆ. ಸ್ವಂತ ತಾಯಿಯಿಂದ ನಡೆದ ಪೀಡನೆ ಸಂಬಂಧ 7 ಪ್ರಕರಣಗಳು ದಾಖಲಾಗಿವೆ. ಮಲತಂದೆಯಿಂದ ಹಿಂಸೆಗೊಳಗಾದ 4, ಮಲತಾಯಿಂದ ಲೈಂಗಿಕ ದಬ್ಬಾಳಿಕೆಗೆ ಒಳಗಾದ ಪ್ರಕರಣಗಳು 2 ಇವೆ.       
     ಬಸ್‍ಗಳ ಕಾರ್ಮಿಕರಿಂದ ಮಕ್ಕಳು ಲೈಂಗಿಕ ಪೀಡೆಗೆ ಒಳಗಾದ 5 ಪ್ರಕರಣಗಳಿವೆ. ಕೆಲವು ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಂದ ಹಿಂಸೆಗೆ ಒಳಗಾದ 3 ಘಟನೆಗಳೂ ಇವೆ.
      ಇತರ ಪ್ರಕರಣಗಳು : ಇನ್ನೊಂದೆಡೆ ಲೈಂಗಿಕ ಪೀಡನೆ ಅಲ್ಲದೆ ಮಕ್ಕಳನ್ನು ಬೇರೆ ಬೇರೆ ರೀತಿ ಹಿಂಸೆಗೊಳಪಡಿಸುವ ಪ್ರಕ್ರಿಯೆಯೂ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿದೆ ಎಂದು ಚೈಲ್ಡ್‍ಲೈನ್  ದಾಖಲಾತಿಗಳು ತಿಳಿಸುತ್ತವೆ. 2018 ಎಪ್ರಿಲ್ ತಿಂಗಳಿಂದ 2019 ಮಾರ್ಚ್ ತಿಂಗಳ ವರೆಗೆ ನಡೆದ ವಿವಿಧ ಪ್ರಕರಣಗಳ ದಾಖಲಾತಿಯ ಅಂಕಿಅಂಶಗಳು ಈ ಕುರಿತು ಬೆಳಕು ಚೆಲ್ಲುತ್ತವೆ.
ಬಾಲ ಕಾರ್ಮಿಕತನಕ್ಕೆ ಸಂಬಂ„ಸಿದ 8 ಪ್ರಕರಣಗಳು ಈ ಅವ„ಯಲ್ಲಿ ದಾಖಲಾಗಿವೆ. ಬಾಲ್ಯ ವಿವಾಹಕ್ಕೆ ಸಂಬಂ„ಸಿದ 2 ಘಟನೆಗಳು ನಡೆದಿವೆ. ದೈಹಿಕ ಹಿಂಸೆ(ಹೊಡೆಯುವುದು ಇತ್ಯಾದಿ)ಗೆ ಸಂಬಂ„ಸಿದ 114 ಪ್ರಕರಣಗಳು, ಬಾಲ ಭಿಕ್ಷುಕತನಕ್ಕೆ ಹಚ್ಚಿದ ಪ್ರಕರಣಗಳು 6, ಮಕ್ಕಳ ಅಪಹರಣ, ಮಾರಾಟ ಇತ್ಯಾದಿಗಳಿಗೆ ಸಂಬಂ„ಸಿದ 3 ಪ್ರಕರಣಗಳು ಇತ್ಯಾದಿಗಳಲ್ಲಿ ಮಕ್ಕಳಿಗೆ ಪುನಶ್ಚೇತನ ಒದಗಿಸುವಲ್ಲಿ ಚೈಲ್ಡ್‍ಲೈನ್ ಯಶಸ್ವಿಯಾಗಿದೆ.
ಈ ಪಿಡುಗನ್ನು ಜಿಲ್ಲೆಯಿಂದ ಬೇರು ಸಹಿತ ಕಿತ್ತೆಸೆಯುವ ನಿಟ್ಟಿನಲ್ಲಿ ಜನಜಾಗೃತಿಯೊಂದೇ ದಾರಿ ಎಂದು ಚೈಲ್ಡ್‍ಲೈನ್ ಪರಿಣತರು ಅಭಿಪ್ರಾಯಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಚಟುವಟಿಕೆಗಳೂ ಗಮನ ಸೆಳೆಯುತ್ತಿವೆ. ಜಿಲ್ಲೆಯಲ್ಲಿ ಈ ವರ್ಷ (ಈ ವರೆಗೆ) ಒಟ್ಟು 156 ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. 5 ಚೈಲ್ಡ್‍ಲೈನ್ ತಂಡಗಳಿಗೆ ತರಬೇತು ನೀಡಲಾಗಿದೆ. ಬೇರೆ ಬೇರೆ ಸಂಘ-ಸಂಸ್ಥೆಗಳಿಗೆ 26 ತರಬೇತು ನೀಡಲಾಗಿದೆ. 16 ಮನೆ ಮನೆ ಸಂಪರ್ಕ ಅಭಿಯಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
    ಮಕ್ಕಳ ಮೇಲೆ ಎಲ್ಲಾದರೂ ದೌರ್ಜನ್ಯ ನಡೆಯುತ್ತಿರುವುದು ಗಮನಕ್ಕೆ ಬಂದಲ್ಲಿ 1098 ಎಂಬ ನಂಬ್ರಕ್ಕೆ ಕರೆಮಾಡಿ ದೂರು ನೀಡಬೇಕು ಎಂದು ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries