ಬದಿಯಡ್ಕ : ಕೃತಿಕಾರ ತನ್ನ ಅಂತರಂಗದೊಳಗಣ ಅಭಿವ್ಯಕ್ತಿಯನ್ನು ಕಥಾ ರೂಪದಲ್ಲಿ ತೆರೆದಿಡುವ ಮೂಲಕ ವಾಚಕರ ಮನದಲ್ಲಿ ಸ್ಥಾನ ಪಡೆಯಲು ಸಾಧ್ಯ ಎಂದು ಸಾಹಿತಿ, ಪ್ರಾಧ್ಯಾಪಕ ಟಿ.ಎ.ಎನ್.ಖಂಡಿಗೆ ಅಭಿಪ್ರಾಯಪಟ್ಟರು.
ಅವರು ಬದಿಯಡ್ಕ ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ಜರಗಿದ ಕುಂಬಳೆ ಉಪಜಿಲ್ಲಾ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯು ಹಮ್ಮಿಕೊಂಡ ಏಕ ದಿನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜರಗಿದ ಕಥಾ ಕಮ್ಮಟದಲ್ಲಿ ಡಾ.ಅಂಬಿಕಾ ಸುತನ್ ಮಾಂಗಾಡ್, ದಿವ್ಯಗಂಗಾ ಮುಳ್ಳೇರಿಯ, ಪದ್ಮನಾಭ ಬ್ಲೇತೂರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಕಿರಿಯ ಪ್ರಾಥಮಿಕ ವಿಭಾಗದ ಮಕ್ಕಳಿಗಾಗಿ ಕಣ್ಮರೆಯಾಗುತ್ತಿರುವ ಜಾನಪದ ಆಟಗಳು ಎಂಬ ವಿಷಯದಲ್ಲಿ ರಂಗಕರ್ಮಿ,ಶಿಕ್ಷಕ ಉದಯ ಸಾರಂಗ್ ಹಾಗೂ ಪ್ರವೀಣ್ ಕಾರಡ್ಕ ತರಗತಿ ನಡೆಸಿದರು. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ, ಬ್ಲಾಕ್ ಯೋಜನಾಧಿಕಾರಿ ಕುಂಞÂಕೃಷ್ಣನ್, ಎನ್.ವಿ.ವಿಷ್ಣುಪಾಲ ಬಿ, ಕೃಷ್ಣ ನಂಬೂದಿರಿ, ಪೆರಡಾಲ ಸರ್ಕಾರಿ ಹೈಸ್ಕೂಲ್ ನ ಮುಖ್ಯೋಪಾಧ್ಯಾಯ ರಾಜಗೋಪಾಲ್, ಶ್ರೀಧರ ನಾಯಕ್ ಕುಕ್ಕಿಲ, ಅನಿತಾ ಪಿ, ಗಿರೀಶ್ ಎಂ.ಪಿ. ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರಂಗ ಉಪಜಿಲ್ಲಾ ಸಂಯೋಜಕ ಅನೀಶ್‍ರಾಜ್ ಪಾಯಂ ಸ್ವಾಗತಿಸಿ, ರಮ್ಯ ಟಿ.ವಿ.ವಂದಿಸಿದರು.


