HEALTH TIPS

ಇಂದು ನಾರಾಯಣಮಂಗಲದಲ್ಲಿ ಓಣಂ-ದಸರಾ ಜಾನಪದ ಉತ್ಸವ


      ಕುಂಬಳೆ: ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗಗಳೊಂದಿಗೆ ಓಣಂ-ದಸರಾ ಜಾನಪದ ಉತ್ಸವವು ಇಂದು(ಶನಿವಾರ)  ಬೆಳಿಗ್ಗೆ 9 ರಿಂದ ನಾರಾಯಣಮಂಗಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ಪರಿಸರದಲ್ಲಿ ನಡೆಯಲಿದೆ.
   ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9ಕ್ಕೆ ನಾರಾಯಣಮಂಗಲ ಶ್ರೀಗಣೇಶ ಮಂದಿರ ಪರಿಸರದಿಂದ ವೈವಿಧ್ಯಮಯ ಜಾನಪದ ಮೆರವಣಿಗೆ ಶಾಲಾ ಪರಿಸರಕ್ಕೆ ಆಗಮಿಸಲಿದೆ. 10 ರಿಂದ ಭಜನಾಗ್ರೇಸರ ಹರಿದಾಸ ಜಯಾನಂದಕುಮಾರ್ ಹೊಸದುರ್ಗ ಹಾಗೂ ಶಿಷ್ಯವೃಂದದವರಿಂದ ಭಜನಾ ಸತ್ಸಂಗ ನಡೆಯಲಿದೆ. 10.30ರಿಂದ ಆರಂಭಗೊಳ್ಳುವ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಪೋಲೀಸ್ ಮಹಾನಿರ್ದೇಶಕ ಕೆ.ವಿ.ಆರ್.ಠಾಗೋರ್ ಅಧ್ಯಕ್ಷತೆ ವಹಿಸುವರು. ಕೇರಳ ರಾಜ್ಯ ನೀರಾವರಿ ಸಚಿವ ಕೆ.ಕೃಷ್ಣನ್ ಕುಟ್ಟಿ ಉದ್ಘಾಟಿಸುವರು. ಭಾರತ ಸರ್ಕಾರದ ಅಂತರಾಷ್ಟ್ರೀಯ ಸಂಪನ್ಮೂಲ ಅಧಿಕಾರಿ ಡಾ.ವೆಂಕಟೇಶ ತುಪ್ಪಿಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕುಂಬಳೆ ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್, ಬ್ಲಾಕ್ ಪಂಚಾಯತಿ ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಕೆ.ಎ.ಖಾದರ್, ಯಕ್ಷದ್ರುವ ಪಟ್ಲ ಪೌಂಡೇಶನ್ ಕುಂಬಳೆ ಘಟಕಾಧ್ಯಕ್ಷ ಎಸ್.ಜಗನ್ನಾಥ ಶೆಟ್ಟಿ ಕುಂಬಳೆ, ಕುಂಬಳೆ ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರೀಫ್, ಕೇರಳ ಬ್ಯಾರಿ ಅಕಾಡೆಮಿ ಅಧ್ಯಕ್ಷ ಯು.ಕೆ.ಸೈಫುಲ್ಲಾ ತಂಙಳ್, ಹಿರಿಯ ಕೊಂಕಣಿ ಸಾಹಿತಿ ಸ್ಟಾನಿ ಕ್ರಾಸ್ತಾ ಬೇಳ, ನಾರಾಯಣಮಂಗಲ ಅನುದಾನಿತ ಶಾಲಾ ಆಡಳಿತ ಮಂಡಳಿ ಸದಸ್ಯ ಗೋಪಾಲಕೃಷ್ಣ ಭಟ್, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ತೆಹ್ರೀಕೆ ಉರ್ದು ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಝೀಮ್ ಮಣಿಮುಂಡ ಉಪಸ್ಥಿತರಿದ್ದು ಶುಭಹಾರೈಸುವರು. ಸಮಾರಂಭದಲ್ಲಿ ಹಿರಿಯ ನಾಟಿವೈದ್ಯ ವಿಶ್ವನಾಥ ಮಡೆಯ ಹಾಗೂ ಹಿರಿಯ ಜಾನಪದ ಕಲಾವಿದ ಶ್ರೀಧರ ಪಣಿಕ್ಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಈ ಸಂದರ್ಭ ಹಿರಿಯ ಜಾನಪದ ಸಂಘಟಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಉಡುಪಿ ಅವರಿಗೆ  ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅವರು ಸಾಧಕರತ್ನ ಪ್ರಶಸ್ತಿ ಪ್ರದಾನ ನಡೆಸುವರು.
    ಸಭಾ ಕಾರ್ಯಕ್ರಮದ ಬಳಿಕ ಅಪರಾಹ್ನ 12.30 ರಿಂದ ಸಾಂಸ್ಕøತಿಕ ವೈವಿಧ್ಯಗಳು ನಡೆಯಲಿದ್ದು, ಶ್ರೀಮಂಡತವ್ವ ಕೊಡವ ಸಾಂಸ್ಕøತಿಕ ಟ್ರಸ್ಟ್ ಸುಳ್ಳಿಮಾಡ ಮಡಿಕೇರಿಯ ಗೌರಿ ನಂಜಪ್ಪ ಮತ್ತು ತಂಡದವರಿಂದ ಬಿಂಕುಮಳೆ ಮತ್ತು ಲಾಲಾಲಾ ನೃತ್ಯ, ಬೊಳಿಕೆ ಜಾನಪದ ತಂಡ ಕನ್ನೆಪ್ಪಾಡಿ ಅವರಿಂದ ತುಳುನಾಡ ಜಾನಪದ ನೃತ್ಯ, ಲತೀಫ್ ಹೇರೂರು ಮತ್ತು ತಂಡದವರಿಂದ ಕೈಮುಟ್ಟ್ ಪಾಟ್, ಜಾನಪದ ಪರಿಷತ್ತು ಗಡಿನಾಡ ಘಟಕದ ತಂಡದಿಂದ ಮಂಗಳಂಕಳಿ, ಸ್ಥಳೀಯ ಪ್ರತಿಭೆಗಳಿಂದ ಜಾನಪದ ನೃತ್ಯ ವೈಭವ, ಯಕ್ಷಗಾನ ನಾಟ್ಯ ವೈಭವ, ಮರಾಠಿ ಜಾನಪದ ನೃತ್ಯ ಪ್ರಕಾರವಾದ ಬಾಳೆಸಾಂತು ಪ್ರದರ್ಶನ, ದಫ್‍ಮುಟ್ಟ್, ಅಮೀರ್ ಕೋಡಿಬೈಲು ಅವರಿಂದ ಉರ್ದು ಗಜಲ್ ಗಾಯನ, ಸಿಂಗಾರಿ ಮೇಳ ಮೊದಲಾದ ವೈವಿಧ್ಯಗಳ ಪ್ರದರ್ಶನ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries