ಕುಂಬಳೆ: ಬಂದ್ಯೋಡು ಸಮೀಪದ ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಭಾನುವಾರ ತೆನೆ ಹಬ್ಬ(ಮೊಂತಿ ಫೆಸ್ತ್) ಆಚರಿಸಲಾಯಿತು.
ಬಾಲೆ ಮರಿಯಮ್ಮಳಿಗೆ ಹೂವುಗಳನ್ನು ಅರ್ಪಿಸಿ, ಸ್ತುತಿ ಗೀತೆಗಳನ್ನು ಹಾಡಿ ನಮಿಸಲಾಯಿತು. ಇಗರ್ಜಿಯ ಧರ್ಮಗುರು ಫಾ.ಮೆಲ್ವಿನ್ ಫೆರ್ನಾಂಡಿಸ್ ತೆನೆಗಳ ಆಶೀರ್ವಚನ ನಡೆಸಿದರು. ಸಹಾಯಕ ಧರ್ಮಗುರು ಫಾ.ಸುನಿಲ್ ಲೋಬೊ, ಫಾ.ಫ್ರಾನ್ಸಿಸ್ ಡಿ'ಸೋಜ ಮಂಗಳೂರು ಉಪಸ್ಥಿತರಿದ್ದರು. ಬಳಿಕ ಮಾತೆಯ ನಾಮಕ್ಕೆ ಸ್ತುತಿ ಗೀತೆಗಳನ್ನು ಹಾಡುತ್ತಾ ಆಶೀರ್ವದಿತ ತೆನೆಗಳೊಂದಿಗೆ ಮೆರವಣಿಗೆಯ ಮೂಲಕ ದೇವಾಲಯಕ್ಕೆ ಪ್ರವೇಶಿಸಲಾಯಿತು.
ತೆನೆ ಹಬ್ಬದ ಸಂಭ್ರಮಾರ್ಥ ನಡೆದ ದಿವ್ಯ ಬಲಿಪೂಜೆಯಲ್ಲಿ ಫಾ.ಫ್ರಾನ್ಸಿಸ್ ಡಿ'ಸೋಜ ಮಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇಗರ್ಜಿಯ ಧರ್ಮಗುರು ಫಾ.ಮೆಲ್ವಿನ್ ಫೆರ್ನಾಂಡಿಸ್, ಸಹಾಯಕ ಧರ್ಮಗುರು ಫಾ.ಸುನಿಲ್ ಲೋಬೊ ಕೊಲ್ಲಂಗಾನ ಉಪಸ್ಥಿತರಿದ್ದರು.


