ಮಂಜೇಶ್ವರ: ಸಂಸ್ಕಾರ ಸಾಹಿತಿ ಮಂಜೇಶ್ವರ ಬ್ಲಾಕ್ ಸಮಿತಿಯ ನೇತೃತ್ವದಲ್ಲಿ ಖ್ಯಾತ ವೈದ್ಯ, ಸಾಹಿತಿ, ಅರ್ಥಧಾರಿ ಡಾ.ಕೆ.ರಮಾನಂದ ಬನಾರಿಯವರಿಗೆ ಗುರುವಂದನಾ ಕಾರ್ಯಕ್ರಮ ಅವರ ಸ್ವಗೃಹದಲ್ಲಿ ಶನಿವಾರ ನಡೆಯಿತು.
ಸಮಿತಿಯ ಅಧ್ಯಕ್ಷ ಸಂಕಬೈಲು ಸತೀಶ ಅಡಪರವರ ಅಧ್ಯಕ್ಷತೆಯಲ್ಲಿ ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಡಾ.ರಮಾನಂದ ಬನಾರಿಯವರನ್ನು ಶಾಲು ಹೊದಿಸಿ, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. ಓಣಂ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಕಲಾಸ್ಪಶರ್ಂನ ಜೀನ್ ಲವಿನಾ ಮೊಂತೇರೋ, ಸಂಸ್ಕಾರ ಸಾಹಿತಿಯ ಮಂಜೇಶ್ವರ ಬ್ಲಾಕ್ ಸಮಿತಿ ಪದಾಧಿಕಾರಿಗಳಾದ ಆರಿಫ್ ಮಚ್ಚಂಪಾಡಿ, ಜಗದೀಶ್ ಮೂಡಂಬೈಲು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


