ಕಾಸರಗೋಡು: ಹಸಿರು ಭೂಮಿ ಯೋಜನೆ ಮಾವುಂಗಾಲ್ ಸ್ವಾಮಿ ರಾಂದಾಸ್ ಸ್ಮಾರಕ ಸರ್ಕಾರಿ ಹೈಯರ್ ಸೆಕೆಂಡರಿ ಲೆಯಲ್ಲಿ ಆರಂಭಗೊಂಡಿದೆ. ಶಾಲೆಯ ವಿದ್ಯಾರ್ಥಿ ಪೆÇಲೀಸ್ ಘಟಕ ವತಿಯಿಂದ ಯೋಜನೆ ಜಾರಿಗೊಂಡಿದೆ.
ಒಬ್ಬ ಕೆಡೆಟ್ 10 ಫಲ ಬಿಡುವ ಸಸ್ಯ ನೆಡುವ ರೀತಿಯ ಯೋಜನೆ ಇದಾಗಿದ್ದು, ಘಟಕದ 88 ಕೆಡೆಟ್‍ಗಳು ಡಿ.31 ವರೆಗೆ ಒಟ್ಟು 880 ಸಸಿ ನೆಡುವ ಉದ್ದೇಶದೊಂದಿಗೆ ಯೋಜನೆ ರೂಪುಗೊಂಡಿದೆ. ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಉದ್ದೇಶದಿಂದ ಪರಿಸರ ಸಾಕ್ಷರತೆ ಬೆಳೆಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಸಸಿ ವಿತರಣೆ ನಡೆಸಿದರು.


