ಮಂಜೇಶ್ವರ: ಕೋಳ್ಯೂರಿನ ಸ್ಪಂದನ ಟ್ರಸ್ಟ್ ಇದರ ತೃತೀಯ ವಾರ್ಷಿಕೋತ್ಸವ ಕೋಳ್ಯೂರಿನ ಶ್ರೀ ಶಂಕರನಾರಾಯಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ಕೋಳ್ಯೂರು ಕ್ಷೇತ್ರದ ಪ್ರಧಾನ ಅರ್ಚಕರಾದ ರವಿಶಂಕರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಡಾ.ಉದಯಕುಮಾರ್ ನೂಜಿ, ಡಾ.ಬಾಲಸುಬ್ರಹ್ಮಣ್ಯ ಭಟ್ ಬರೆಮನೆ, ರಾಜ ಬೆಳ್ಚಾಡ ಉದ್ಯಾವರ ಮಾಡ, ಯಜ್ಞೇಶ್ ಶಿವ ತೀರ್ಥಪದವು ಮುಳಿಂಜ, ಸುರೇಶ್ ತುಂಗ ಕೋಳ್ಯೂರು ಉಪಸ್ಥಿತರಿದ್ದರು. ಪ್ರಭಾಕರ್ ಮಜೀರ್ಪಳ್ಳ ಅಧ್ಯಕ್ಷತೆ ವಹಿಸಿದ್ದರು.
ಶ್ರೀಕಾಂತ ಪಡುಮೂಲೆ, ಶೈಲಜಾ ದಿನೇಶ್ ಮಡ್ವ, ಪುಷ್ಪ ಅವರನ್ನು ಗೌರವಿಸಲಾಯಿತು. ಹತ್ತು ಬಡ ಕುಟುಂಬಗಳಿಗೆ ಸಹಾಯ ಸಾಮಾಗ್ರಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಟ್ರಸ್ಟ್‍ನ 36ನೇ ಸೇವಾ ಯೋಜನೆಯ ಫಲಾನುಭವಿ ಆಶ್ವಿತಾ ಅವರಿಗೆ ಸಹಾಯಧನದ ಚೆಕ್ ಹಸ್ತಾಂತರ ಮಾಡಲಾಯಿತು. ಸಂಸ್ಥೆಯ ಸ್ಥಾಪಕ ಸದಸ್ಯ ಲೋಕೇಶ್ ಕೋಳ್ಯೂರು ವರದಿ ವಾಚಿಸಿದರು. ದೀಕ್ಷಿತಾ ಕೋಳ್ಯೂರು ಸ್ವಾಗತಿಸಿ, ರಂಜಿತಾ ಸಂಜಯ್ ಕೋಳ್ಯೂರು ವಂದಿಸಿದರು. ಪ್ರಜ್ಞಾ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಡಿ ಡ್ಯಾನ್ಸ್ ಕೋಳ್ಯೂರು ಅವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.