ಮುಳ್ಳೇರಿಯ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಳ್ಳೇರಿಯ ಕಾರ್ಯಕ್ಷೇತ್ರದ ಮಲ್ಲಾವರದ ಪುರುಷೋತ್ತಮ ಅವರ ಮನೆಯಲ್ಲಿ ಜ್ಞಾನ ವಿಕಾಸ ಕೇಂದ್ರದ ಸೃಜನಶೀಲ ಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ಹೇಮಲತಾ ಅವರು ಅಧ್ಯಕ್ಷತೆ ವಹಿಸಿದರು. ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಹಿತಿ, ಮಾರ್ಗದರ್ಶನ ನೀಡಿದರು.
ಮುಖ್ಯ ಅತಿಥಿಯಾಗಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ರಾಮಯ್ಯ ರೈ, ಭಾರ್ಗವಿ, ಮವ್ವಾರು ಒಕ್ಕೂಟದ ಅಧ್ಯಕ್ಷ ಕೊರಗಪ್ಪ, ಯೋಗ ಶಿಕ್ಷಕ ನಾರಾಯಣ ಮಾಸ್ತರ್ ಮುಳ್ಳೇರಿಯ, ವಲಯದ ಮೇಲ್ವಿಚಾರಕ ಉದಯ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸಂಗೀತ ಜೆ, ಸೇವಾ ಪ್ರತಿನಿಧಿ ಚಂದ್ರಕಲಾ, ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.


