ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಕೃಷಿಭವನದ ನೇತೃತ್ವದಲ್ಲಿ ಶನಿವಾರ ಬದಿಯಡ್ಕ ಇಕೋಶೋಪ್‍ನಲ್ಲಿ ಆರಂಭಿಸಲಾದ ಓಣಂ ಊರ ತರಕಾರಿ ಸಂತೆಯನ್ನು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಸಾವಯವ ಕೃಷಿಯ ಮೂಲಕ ಊರಿನಲ್ಲಿ ಉತ್ಪಾದಿಸಿದ ತರಕಾರಿಯನ್ನು ಬಳಸಿ ವಿಷಮುಕ್ತ ಆಹಾರವನ್ನು ಬಳಸೋಣ. ಪೌಷ್ಟಕಾಂಶಯುಕ್ತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ನಮ್ಮದಾಗಲಿದೆ ಎಂದರು.
ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಸೈಬುನ್ನೀಸ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ಅನ್ವರ್ ಓಸೋನ್, ಶ್ಯಾಮಪ್ರಸಾದ ಮಾನ್ಯ, ಸದಸ್ಯರುಗಳಾದ ವಿಶ್ವನಾಥ ಪ್ರಭು ಕರಿಂಬಿಲ, ಬಾಲಕೃಷ್ಣ ಶೆಟ್ಟಿ ಕಡಾರು, ಸಿರಾಜ್ ಮುಹಮ್ಮದ್, ಗ್ರಾಮಪಂಚಾಯಿತಿ ಕಾರ್ಯದರ್ಶಿ ಪ್ರದೀಪ್, ಪಿ.ಜಿ.ಚಂದ್ರಹಾಸ ರೈ, ಪದ್ಮನಾಭ ಶೆಟ್ಟಿ, ಕೃಷ್ಣಮಣಿಯಾಣಿ ಮೊಳೆಯಾರು, ಕೃಷಿ ಇಲಾಖೆಯ ಅಧಿಕಾರಿಗಳು, ಕೃಷಿಕರು ಜೊತೆಗಿದ್ದರು. ಬದಿಯಡ್ಕ ಕೃಷಿ ಅಧಿಕಾರಿ ಮೀರಾ ಸ್ವಾಗತಿಸಿ, ಸಹಾಯಕ ಕೃಷಿ ಅಧಿಕಾರಿ ಜಯರಾಮ ವಂದಿಸಿದರು.

