ಕುಂಬಳೆ: ಧರ್ಮತ್ತಡ್ಕ ಶ್ರೀದುರ್ಗಾ ಪರಮೇಶ್ವರಿ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿ ಬಳಿಕ ಕಳೆದ ಒಂಬತ್ತು ವರ್ಷಗಳಿಂದ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದ ಎನ್. ರಾಮಚಂದ್ರ ಭಟ್ ಅವರು ಹೈಯರ್ ಸೆಕೆಂಡರಿ ಪ್ರಾಂಶುಪಾಲರಾಗಿ ಮುಂಭಡ್ತಿ ಹೊಂದಿದ್ದಾರೆ. ಇದೇ ಸಂದರ್ಭ ಶಾಲೆಯ ಜೀವಶಾಸ್ತ್ರ ಅಧ್ಯಾಪಕರಾದ ಇ. ಎಚ್. ಗೋವಿಂದ ಭಟ್ ಅವರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿದ್ದಾರೆ. ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವತಿಯಿಂದ ಮುಂಭಡ್ತಿ ಹೊಂದಿದ ಮುಖ್ಯೋಪಾಧ್ಯಾಯ ಹಾಗೂ ಪ್ರಾಂಶುಪಾಲರನ್ನು ಹೂಗುಚ್ಛ ನೀಡುವ ಮೂಲಕ ಅಭಿನಂದಿಸಲಾಯಿತು.
ಪ್ರಾಂಶುಪಾಲರಾಗಿ ಭಡ್ತಿ: ಅಭಿನಂದನೆ
0
ಸೆಪ್ಟೆಂಬರ್ 07, 2019