ಪೆರ್ಲ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಈ ಬಾರಿ ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅ. 28 ರಿಂದ 31ರ ವರೆಗೆ ಜರಗಲಿದೆ. ಉಪಜಿಲ್ಲೆಯ ವಿವಿಧ ಶಾಲೆಗಳ 3000 ದಷ್ಟು ಮಕ್ಕಳು ವಿವಿದ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸುವ ಈ ಕಲೋತ್ಸವದ ಪೂರ್ವ ಸಿದ್ದತೆಗಳು ಆರಂಭಗೊಂಡಿದ್ದು ಕಾರ್ಯಕ್ರಮ ದ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನಾ ಸಭೆ ಶೇಣಿ ಶ್ರೀ ಶಾರದಾಂಬ ಶಾಲೆಯಲ್ಲಿ ಜರಗಿತು.
ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ಮುಳ್ಳೇರಿಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಶೇಣಿ ಶ್ರೀ ಶಾರದಾಂಬ ಶಾಲಾ ಪ್ರಬಂಧಕರಾದ ಸೋಮಶೇಖರ್ ಜೆ.ಎಸ್. ಸಭೆಯ ಅಧ್ಯಕ್ಷತೆವಹಿಸಿದ್ದರು. ಬಿಪಿಒ ಕುಂ??ಕೃಷ್ಣನ್,ಎಚ್.ಎಂ.ಫಾರಂ ಸಂಚಾಲಕ ವಿಷ್ಣುಪಾಲ ಪಂಜಿಕಲ್ಲು ಮೊದಲಾದವರು ಮಾತನಾಡಿದರು. ಶೇಣಿ ಶಾಲೆಯ ವಿವಿಧ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಮೊಯಿದಿನ್ ಕುಟ್ಟಿ,ರೇಖಾ ಜ್ಯೋತಿ,ವಿಲ್ಸನ್ ಡಿ.ಸೋಜ,ಶಶಿಪ್ರಭಾ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಲೋತ್ಸವದ ಲಾಂಛನ ಹಾಗೂ ಬ್ಲೋಗ್ ಬಿಡುಗಡೆ ನಡೆಯಿತು. ಲಾಂಛನವನ್ನು ತಯಾರಿಸಿದ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢ ಶಾಲಾ ಕಲಾ ಶಿಕ್ಷಕ ಕೃಷ್ಣ ಪ್ರಸಾದ ಬನಾರಿ ಅವರನ್ನು ಶಿಕ್ಷಣಾಧಿಕಾರಿಗಳು ಅಭಿನಂದಿಸಿದರು.ಶೇಣಿ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಶ್ರೀಶ ಕುಮಾರ್ ಎಂ.ಪಿ. ಕಲೋತ್ಸವದ ಬಗ್ಗೆ ಸಮಗ್ರ ರೂಪುರೇಖೆಯನ್ನು ಮಂಡಿಸಿದರು. ಈ ಬಾರಿಯ ಕಲೋತ್ಸವಕ್ಕೆ ಸುಮಾರು 15ಲಕ್ಷ ರೂಗಳ ಬಜೆಟ್ ನಲ್ಲಿ ರೂಪುರೇಷೆ ನೀಡಲಾಗಿದ್ದು ಸ್ವಾಗತ ಸಮಿತಿ ಸಭೆಯಲ್ಲಿ ವಿವಿಧ ಶಾಲಾ ಮುಖ್ಯೋಪಾಧ್ಯಾಯರು,ಶಿಕ್ಷಕರು,ಜನ ಪ್ರತಿನಿಧಿಗಳು, ಸಂಘ ಸಂಸ್ಥೆ,ವಿವಿಧ ಸಂಘಟನಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.ಕಲೋತ್ಸವದ ಯಶಸ್ವಿಗಾಗಿ ಸ್ವಾಗತ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳನ್ನು ರಚಿಸಿ ಪದಾಧಿಕಾರಿಗಳನ್ನು ಆರಿಸಲಾಯಿತು. ಶೇಣಿ ಶ್ರೀ ಶಾರದಾಂಬ ಎಯುಪಿ ಶಾಲಾ ಮುಖ್ಯೋಪಾಧ್ಯಾಯ ರಾಧಕೃಷ್ಣ ನಾಯಕ್ ಸ್ವಾಗತಿಸಿ ಹೈಯರ್ ಸೆಕೆಂಡರಿ ಶಾಲಾ ಪ್ರಭಾರ ಪ್ರಾಂಶುಪಾಲೆ ವಿಜಯಲಕ್ಷ್ಮಿ ವಂದಿಸಿದರು.ಶಿಕ್ಷಕ ಶಾಸ್ತಾ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.


