ಕಲ್ಲುಗದ್ದೆಯಲ್ಲಿ ನವರಾತ್ರಿ ಮಹೋತ್ಸವ
ಬದಿಯಡ್ಕ: ಎಡನೀರು ಸಮೀಪದ ಕಲ್ಲುಗದ್ದೆ ಶ್ರೀ ದುರ್ಗಾಂಬಿಕಾ ಮಹಾಮಾತೆಯ ಸನ್ನಿಧಿಯಲ್ಲಿ ಸೆ.29 ರಿಂದ ಅ.8 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಮಹೋತ್ಸವ ಜರಗಲಿದೆ. ಅ.4 ರಂದು ಸಂಜೆ 6.30 ಕ್ಕೆ ಧ್ಯಾನ ದಾಸೋಹ, ಅ.8 ರಂದು ಬೆಳಗ್ಗೆ 10.15 ಕ್ಕೆ ವಿದ್ಯಾರಂಭ, ಮಧ್ಯಾಹ್ನ 1.30 ಕ್ಕೆ ಮಹಾ ನವಾನ್ನ ಸಂತರ್ಪಣೆ ನಡೆಯುವುದು.
....................................................................................................................................................................................................................................
ತಾಯತೊಟ್ಟಿ : ನವರಾತ್ರಿ ಮಹೋತ್ಸವ
ಕಾಸರಗೋಡು: ಪರವನಡ್ಕ ತಾಯತೊಟ್ಟಿ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಸೆ.29 ರಿಂದ ಅ.8 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಮಹೋತ್ಸವ ಜರಗಲಿದೆ. ಅ.4 ರಂದು ಬೆಳಗ್ಗೆ 10.30 ಕ್ಕೆ ಸದ್ಗ್ರಂಥ ಪಾರಾಯಣ, ಅ.7 ರಂದು ಮಹಾನವಮಿ, ಆಯುಧ ಪೂಜೆ, ವಾಹನ ಪೂಜೆ, ಅ.8 ರಂದು ವಿಜಯದಶಮಿ ನಡೆಯುವುದು.
.....................................................................................................................................................................................................................................
ಕೂಡ್ಲು : ಶರನ್ನವರಾತ್ರಿ ಮಹೋತ್ಸವ
ಕಾಸರಗೋಡು: ಕೂಡ್ಲು ರಾಮದಾಸನಗರದಲ್ಲಿರುವ ಕೆಳದಿ ರಾಜರ(ಇಕ್ಕೇರಿ) ಮನೆ ದೇವರಾದ ಶ್ರೀ ಅಶ್ವಾರೂಢ ಪಾರ್ವತಿ ದೇವಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ಸೆ.29 ರಿಂದ ಅ.8 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅ.2 ರಂದು ಶ್ರೀ ವೆಂಕಟ್ರಮಣ ಸ್ವಾಮಿಯ ಮುಡಿಪು ಶುದ್ಧಿ ಹಾಗು ಕುಲದೇವತಾರಾಧನೆಯೊಂದಿಗೆ ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಭಜನೆ ಹಾಗು ಮಹಾಪೂಜೆ ಜರಗಲಿದೆ.
........................................................................................................................................................................................................................................
ಪಿಲಿಕುಂಜೆ : ನವರಾತ್ರಿ ಮಹೋತ್ಸವ
ಕಾಸರಗೋಡು: ಪಿಲಿಕುಂಜೆ ಶ್ರೀ ಜಗದಂಬಾ ದೇವಿ ದೇವಸ್ಥಾನದಲ್ಲಿ ಸೆ.29 ರಿಂದ ಅ.8 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಮಹೋತ್ಸವ ಜರಗಲಿದೆ.
ಅ.3 ರಂದು ಬೆಳಗ್ಗೆ 10 ಕ್ಕೆ ಚಂಡಿಕಾ ಹೋಮ, ಅ.5 ರಂದು ಬೆಳಗ್ಗೆ 10 ಕ್ಕೆ ಸ್ವಯಂವರ ಪಾರ್ವತಿ ಹೋಮ, 6 ರಂದು ಬೆಳಗ್ಗೆ 10 ಕ್ಕೆ ಭದ್ರಕಾಳಿ ಹೋಮ, ಅ.8 ರಂದು ಬೆಳಗ್ಗೆ ವಿದ್ಯಾರಂಭ, ಸಂಜೆ 6 ಕ್ಕೆ ದೀಪಾರಾಧನೆ ನಡೆಯಲಿದೆ.
...........................................................................................................................................................................................................................................
ಪಾಂಗೋಡು : ನವರಾತ್ರಿ ಮಹೋತ್ಸವ
ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ.29 ರಿಂದ ಅ.8 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಮಹೋತ್ಸವ ನಡೆಯಲಿದೆ. ಅ.6 ರಂದು ಬೆಳಗ್ಗೆ 8 ರಿಂದ ಚಂಡಿಕಾ ಹೋಮ, ಸಂಜೆ 6 ರಿಂದು ದುರ್ಗಾ ನಮಸ್ಕಾರ ಪೂಜೆ, ರಾತ್ರಿ 12 ರಿಂದ ಸರ್ವಾಲಂಕಾರ ಮಹಾಪೂಜೆ, ಅಗ್ನಿ ಸೇವೆ(ದೊಂದಿ ಸೇವೆ), 7 ರಂದು ಮಧ್ಯಾಹ್ನ 1 ರಿಂದ ಆಯುಧ ಪೂಜೆ, 8 ರಂದು ಬೆಳಗ್ಗೆ ಗ್ರಂಥ ಪೂಜೆ, ವಿದ್ಯಾರಂಭ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯುವುದು.
..............................................................................................................................................................................................................................................
ಹಾಲೆ ಹೊಂಡ : ನವರಾತ್ರಿ ಮಹೋತ್ಸವ
ಕಾಸರಗೋಡು: ರಾವಣೇಶ್ವರ ಹಾಲೆಹೊಂಡ ಶ್ರೀ ಮಹಾಮಾಯೆ ದೇವಸ್ಥಾನದಲ್ಲಿ ಸೆ.29 ರಿಂದ ಅ.8 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಮಹೋತ್ಸವ ಜರಗಲಿದೆ. ಸೆ.29 ರಂದು ಪೂರ್ವಾಹ್ನ 9 ಕ್ಕೆ ಶ್ರೀ ಗಣಪತಿ ಹೋಮ, 10.30 ಕ್ಕೆ ಸಾಮೂಹಿಕ ಪ್ರಾರ್ಥನೆ, ಅ.7 ರಂದು ರಾತ್ರಿ 10 ಕ್ಕೆ ವಿಶೇಷ ಮಹಾಪೂಜೆ, 8 ರಂದು ಮಧ್ಯಾಹ್ನ 12 ಕ್ಕೆ ವಿದ್ಯಾದಶಮಿ, ಪೂಜೆ ನಡೆಯುವುದು.
...................................................................................................................................................................................................................................................
ಬಂದಡ್ಕ : ಮಹಾನವರಾತ್ರಿ ಪೂಜೋತ್ಸವ
ಕಾಸರಗೋಡು: ಬಂದಡ್ಕ ಶ್ರೀ ರಾಮನಾಥ ದೇವಳದಲ್ಲಿ ಸೆ.29 ರಿಂದ ಅ.8 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಮಹಾನವರಾತ್ರಿ ಪೂಜೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಅ.4 ರಂದು ಶಾರದಾ ಪೂಜೆ, 8 ರಂದು ವಿದ್ಯಾದಶಮಿ ನಡೆಯುವುದು. ಅ.2 ರಂದು ನಾಗತಂಬಿಲ ಜರಗಲಿದೆ.
.....................................................................................................................................................................................................................................................
ಆದೂರು : ನವರಾತ್ರಿ ಪೂಜಾ ಮಹೋತ್ಸವ
ಮುಳ್ಳೇರಿಯ: ಆದೂರು ಶ್ರೀ ಭಗವತೀ ಕ್ಷೇತ್ರದಲ್ಲಿ ಸೆ.29 ರಿಂದ ಅ.7 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಪೂಜಾ ಮಹೋತ್ಸವ ಮತ್ತು ಲಕ್ಷ ದೀಪೆÇೀತ್ಸವ ಜರಗಲಿದೆ. ಸೆ.29 ರಂದು ಸಂಜೆ 6.30 ಕ್ಕೆ ಲಕ್ಷ ದೀಪೆÇೀತ್ಸವ, ಅ.7 ರಂದು ರಾತ್ರಿ 9 ರಿಂದ ವಿದ್ಯಾರಂಭ ನಡೆಯುವುದು.
.......................................................................................................................................................................................................................................................
ಕಲ್ಲಕಟ್ಟ : ನವರಾತ್ರಿ ಮಹೋತ್ಸವ
ಕಾಸರಗೋಡು: ಕೊಲ್ಲಂಗಾನ ಕಲ್ಲಕಟ್ಟದ ಶ್ರೀ ನಿಲಯ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ಸೆ.29 ರಿಂದ ಅ.8 ರ ವರೆಗೆ ನವರಾತ್ರಿ ಮಹೋತ್ಸವ ಮತ್ತು ಶ್ರೀ ಸುಬ್ರಹ್ಮಣ್ಯ ಯಕ್ಷಗಾನ ಕಲಾ ಸಂಘ ಕೊಲ್ಲಂಗಾನ ಇದರ 31 ನೇ ವಾರ್ಷಿಕೋತ್ಸವ `ಯಕ್ಷ ದಶ ವೈಭವ' ಕಾರ್ಯಕ್ರಮ ನಡೆಯುವುದು.
.........................................................................................................................................................................................................................................................
ಕೋಟೆಕಣಿ : ನವರಾತ್ರಿ ಮಹೋತ್ಸವ
ಕಾಸರಗೋಡು: ಕೋಟೆಕಣಿ ಸಪರಿವಾರ ಶ್ರೀ ಅನ್ನಪೂರ್ಣೇಶ್ವರೀ ಮಹಾಕಾಳಿ ದೇವಸ್ಥಾನದಲ್ಲಿ ಸೆ.29 ರಿಂದ ಅ.8 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಮಹೋತ್ಸವ ಜರಗಲಿದೆ. ಅ.7 ರಂದು ರಾತ್ರಿ 1 ರಿಂದ ಅಗ್ನಿ ಸೇವೆ, 8 ರಂದು ಬೆಳಗ್ಗೆ ವಿದ್ಯಾರಂಭ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

