ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯಲ್ಲಿ ಪ್ರಥಮ ರ್ಯಾಂಕಿನೊಂದಿಗೆ ಮೂರು ಸ್ವರ್ಣಪದಕಗಳನ್ನು ಗಳಿಸುವುದರ ಮೂಲಕ ವಿಶೇಷ ಸಾಧನೆಗೈದ ಮೀಯಪದವು ಚಿಗುರುಪಾದೆಯ ನಿತಿನ್ ಕೃಷ್ಣನನ್ನು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಇತ್ತೀಚೆಗೆ ಪ್ರತಿಭಾ ಪುರಸ್ಕಾರ ನೀಡಿ ಆಶೀರ್ವದಿಸಿದರು. ಈತನು ಮೀಯಪದವು ಪ್ರೌಢ ಶಾಲೆಯ ಅಧ್ಯಾಪಕ ಶಿವಶಂಕರ.ಬಿ ಹಾಗೂ ಮೋಹಿನಿ ದಂಪತಿಗಳ ಪುತ್ರ. ಹಾಸನದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಾಂಗ ನಡೆಸಿರುತ್ತಾನೆ.


