ಮಧೂರು: ಧರ್ಮಸ್ಥಳ ಮೇಳದ ಭಾಗವತ ಹಾಗೂ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯರನ್ನು ಇತ್ತೀಚೆಗೆ ಯಕ್ಷಗಾನ ಸಾಂಸ್ಕøತಿಕ ವೇದಿಕೆ ತುಮಕೂರು ಕಲಾ ಸಂಸ್ಥೆಯ ವತಿಯಿಂದ ಮಯ್ಯರ ಕಲಾ ಸೇವೆಯನ್ನು ಮನಗಂಡು ಗಣ್ಯರ ಸಮಕ್ಷಮ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಅನಂತ ರಾವ್ ತುಮಕೂರು, ನರಸಿಂಹ ರಾವ್, ನಾಗರಾಜ ಧನ್ಯ, ಗೋಪಾಲಕೃಷ್ಣ ಗೋಟರ್ ಉಪಸ್ಥಿತರಿದ್ದರು.
ಬಳಿಕ ಶ್ರೀ ಪಾಂಚಜನ್ಯ ಯಕ್ಷಗಾನ ಕಲಾತಂಡ ನೇರಳಕಟ್ಟೆ ಪುತ್ತೂರು ವತಿಯಿಂದ ಗೋವರ್ಧನೋದ್ಧಾರ-ಪಾಂಚಜನ್ಯ ಯಕ್ಷಗಾನ ಪ್ರದರ್ಶನ ಜರಗಿತು.


