ಮಂಜೇಶ್ವರ: ಇತಿಹಾಸ ಪ್ರಸಿದ್ದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿಂಹಮಾಸ ನಾಲ್ಕೂ ಶನಿವಾರಗಳಲ್ಲಿ ಬಲಿವಾಡುಕೂಟ ವೈದಿಕ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಿ ಸಂನ್ನಗೊಂಡಿತು.
ಕಾರ್ಯಕ್ರಮದಂಗವಾಗಿ ಪ್ರತೀ ಶನಿವಾರ ವಿಶೇಷಬಲಿವಾಡುಕೂಟ, ಅನ್ನಸಂತರ್ಪಣೆ ಜರಗಿದ್ದು, ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಯಕ್ಷಬಳಗ ಹೊಸಂಗಡಿ ತಂಡದ ಆಷಾಡಮಾಸ ತಾಳಮದ್ದಳೆ ಕೂಟ ಸಮಾರೋಪ ಕಾರ್ಯಕ್ರಮ ಹಾಗೂ ಸತ್ವಪರೀಕ್ಷೆ ತಾಳಮದ್ದಳೆ, ವೇದಮೂರ್ತಿ ಹರಿನಾರಾಯಣ ಮಯ್ಯ ಬಜೆ ಕುಂಬಳೆಯವರಿಂದ ಶಿವಪುರಾಣ ಪ್ರವಚನ, ನಿನಾದ ಕ್ರಿಯೇಷನ್ಸ್ ಮಂಗಲ್ಪಾಡಿ ತಂಡದಿಂದ ಭಕ್ತಿಗಾನ ಲಹರಿ, ಯಕ್ಷಮಿತ್ರರು ಮೀಯಪದವು ತಂಡದಿಂದ ಶ್ರೀಕೃಷ್ಣ ಪರಂಧಾಮ ತಾಳಮದ್ದಳೆ ಜರಗಿತು. ಪ್ರತೀ ಶನಿವಾರಗಳಂದು ಅತ್ಯಧಿಕ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿ ಕಾರ್ಯಕ್ರಮ ಭಕ್ತಿಪೂರ್ವಕ ಸಂಪನ್ನಗೊಂಡಿತು.


