ಮಂಜೇಶ್ವರ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ವಿಶೇಷ ಸಭೆ ಇತ್ತೀಚೆಗೆ ಯಕ್ಷಬಳಗ ಹೊಸಂಗಡಿ ಸಹಯೋಗದೊಂದಿಗೆ ಹೊಸಂಗಡಿಯ ಹಿಲ್ ಸೈಡ್ ಸಭಾಂಗಣದಲ್ಲಿ ಜರಗಿತು.
ಕಾಸರಗೋಡಿನ ಸಿರಿಬಾಗಿಲಿನಲ್ಲಿ ನಾಡಿನ ಹಿರಿಯ ಸಂಶೋಧಕ, ಲೇಖಕ ಸಿರಿಬಾಗಿಲು ವೆಂಕಪ್ಪಯ್ಯರ ಹೆಸರಲ್ಲಿ ಸುಮಾರು 2ಕೋಟಿ ರೂ.ವೆಚ್ಚದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಭವನ ನಿರ್ಮಾಣಗೊಳ್ಳಲಿದ್ದು, ಕಟ್ಟಡ ನಿರ್ಮಾಣದ ಶಿಲನ್ಯಾಸ ಪೂರ್ವ ತಯಾರಿ ಹಾಗೂ ಸಮಗ್ರ ರೂಪು ರೇಶೆ ಹಾಗೂ ಅನುಷ್ಠಾನದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅಧ್ಯಕ್ಷತೆ ವಹಿಸಿ ಪ್ರತಿಷ್ಟಾನದ ಮುಂದಿನ ಕಾರ್ಯ ಯೋಜನೆ ಬಗ್ಗೆ ಸಮಗ್ರ ಮಾಹಿತಿ ಸಭೆಗೆ ನೀಡಿದರು. ಯಕ್ಷಬಳಗ ಹೊಸಂಗಡಿ ಸಂಸ್ಥೆಯ ಸಂಚಾಲಕ ಸತೀಶ ಅಡಪ ಸಂಕಬೈಲು ಸಭೆ ನಿರ್ವಹಿಸಿದರು. ಪ್ರತಿಷ್ಠಾನದ ಟ್ರಸ್ಟಿಗಳು ಹಾಗೂ ಸದಸ್ಯರು ಹಾಗೂ ಕಲಾ ಪ್ರೇಮಿಗಳು ಸಭೆಯಲ್ಲಿ ಭಾಗವಹಿಸಿದ್ದರು.

