ಪೆರ್ಲ: ಬಂಟರು ಸಮಾಜಕ್ಕೆ ತಮ್ಮದೆ ಆದ ಕೊಡುಗೆಗಳನ್ನು ನೀಡಿರುವುದು ಮಾತ್ರವಲ್ಲ ಬಂಟ ಎನ್ನುವುದು ಸ್ವಾಭಿಮಾನದ ಮತ್ತು ವೀರತೆಯ ಸಂಕೇತ. ಬಂಟ ಸಮಾಜದಲ್ಲಿ ಬಡವನಾಗಿರಲಿ ಶ್ರೀಮಂತನಾಗಿರಲಿ ಬಂಟ ಯಾವತ್ತೂ ಬಂಟನಾಗಿಯೇ ಉಳಿಯುತ್ತಾನೆ. ಸಾಂಪ್ರದಾಯಕ ಮನೆತನಗಳನ್ನು, ಸಂಸ್ಕಾರವನ್ನು ಬಿತ್ತುವಲ್ಲಿ ಮತ್ತು ಪರಂಪರೆಯ ಸಂಸ್ಕøತಿ ಉಳಿವಿಗಾಗಿ ನಮ್ಮ ಸಮಾಜದದ ಸೇವೆ ಅಗ್ರಮಾನ್ಯವಾಗಿದೆ ಎಂದು ಯು.ಎ ಎಕ್ಸ್‍ಚೇಂಜ್‍ನ ನಿವೃತ್ತ ನಿರ್ದೇಶಕ ಸುಧೀರ್ ಕುಮಾರ್ ರೈ ಎಣ್ಮಕಜೆ ಅವರು ಅಭಿಪ್ರಾಯಪಟ್ಟರು.
ಬಂಟ್ಸ್ ಸರ್ವೀಸ್ ಸೊಸೈಟಿ ಎಣ್ಮಕಜೆ ಪಂಚಾಯತಿ ಘಟಕದ ಆಶ್ರಯದಲ್ಲಿ ಇತ್ತೀಚೆಗೆ ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನಡೆದ `ಬಂಟೆರೆ ಕೂಟೊ'ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರದಲ್ಲಿ ಬಂಟರ ಸಾಧನೆ ಮಹತ್ತರವಾದುದು. ಕೃಷಿ ಕುರಿತಾಗಿ ಇಂದು ಕಂಡುಬರುತ್ತಿರುವ ಕೀಳು ಮನೋಭಾವದಿಂದ ಹೊರಬರಬೇಕು. ಕೃಷಿಕರ ಬಗೆಗಿನ ತಾತ್ಸರ ಮನೋಭಾವ ಸಲ್ಲದು. ಪಟ್ಟಣದ ವಿಷಯುಕ್ತ ಗಾಳಿ, ವಾತವರಣ ವಿಷಾಂಶ ಆಹಾರ ಸೇವನೆಯಿಂದ ಶರೀರ ಕಾಯಿಲೆಗಳ ಆಶ್ರಯತಾಣವಾಗಿ ಪರಿವರ್ತನೆಗೊಳ್ಳುತ್ತಿದೆ. ಹಳ್ಳಿಯಲ್ಲಿ ಜೀವಿಸುವ ಸುಖ ನೆಮ್ಮದಿ ಪಟ್ಟಣದ ಜೀವನದಲ್ಲಿ ಸಿಗಲಾರದು. ಹಳ್ಳಿಯ ಜನರ ಮುಗ್ಧತೆ, ಸಂಸ್ಕಾರ ಶುದ್ದತೆಯ ಆಚಾರಗಳು ಪೇಟೆಯಲ್ಲಿ ಕಾಣಲಾಗದು. ಸಮಾಜದ ಜನರ ಪ್ರೀತಿ ಮೌಲ್ಯಗಳನ್ನು, ಪರಸ್ಪರ ಬೆಸೆಯುವ ಕೌಟುಂಬಿಕ ವಾತವರಣವನ್ನು ಇಂತಹ ಸಂಘಟನೆಯ ಮೂಲಕ ಕಾಣಬಹುದಾಗಿದೆ ಎಂದು ಬಂಟ್ಸ್ ಸರ್ವೀಸ್ ಸೊಸೈಟಿಯ ಧ್ಯೇಯೋದ್ದೇಶವನ್ನು ಶ್ಲಾಘಿಸುತ್ತ ಮಾತನಾಡಿದರು.
ಬಂಟ್ಸ್ ಸರ್ವೀಸ್ ಸೊಸೈಟಿ ಎಣ್ಮಕಜೆ ಪಂಚಾಯತಿ ಅಧ್ಯಕ್ಷ ನಾರಾಯಣ ಆಳ್ವ ಎಣ್ಮಕಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಬಂಟ್ಸ್ ಸೋಸೈಟಿ ಅಧ್ಯಕ್ಷ ನ್ಯಾಯವಾದಿ ಸದಾನಂದ ರೈ, ಕೋಳೂರು ಸತೀಶ್ಚಂದ್ರ ಭಂಡಾರಿ, ಜಿಲ್ಲಾ ಬಂಟ್ಸ್ ಸೊಸೈಟಿ ಖಾಜಾಂಜಿ ಚಂದ್ರಹಾಸ ರೈ ಪೆರಡಾಲ, ಬೆಳ್ಳೂರು ಪಂಚಾಯತಿ ಬಂಟ್ಸ ಸೊಸೈಟಿ ಮಹಿಳಾ ಘಟಕ ಅಧ್ಯಕ್ಷೆ ಡಾ. ವಿದ್ಯಾ ಮೋಹನ್‍ದಾಸ್ ರೈ ನಾಟೆಕಲ್ಲು, ಎಣ್ಮಕಜೆ ಬಂಟ್ಸ್ ಸರ್ವೀಸ್ ಸೊಸೈಟಿ ಮಹಿಳಾ ಘಟಕ ಅಧ್ಯಕ್ಷೆ ರಾಜೇಶ್ವರೀ ರೈ ಬಜಕೂಡ್ಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಂಟ್ಸ್ ಸರ್ವೀಸ್ ಸೊಸೈಟಿ ಎಣ್ಮಕಜೆ ಪಂಚಾಯತಿ ಕಾರ್ಯದರ್ಶಿ ಶರಶ್ಚಂದ್ರ ಶೆಟ್ಟಿ ಶೇಣಿ ಸ್ವಾಗತಿಸಿ, ಬಂಟ್ಸ್ ಸರ್ವೀಸ್ ಸೊಸೈಟಿ ಎಣ್ಮಕಜೆ ಪಂಚಾಯತಿ ಜೊತೆ ಕಾರ್ಯದರ್ಶಿ ರಮೇಶ್ಚಂದ್ರ ರೈ ನಡುಬೈಲು ವಂದಿಸಿದರು. ಕು.ಸೃಷ್ಠಿ ಶೆಟ್ಟಿ ಕಾಟುಕುಕ್ಕೆ, ಕು.ಸ್ಮøತಿ ಶೆಟ್ಟಿ ಮಾಯಿಲಂಗಿ ಹಾಗೂ ಸ್ವರ್ಣಲಕ್ಷ್ಮಿ ಶೆಟ್ಟಿ ಬಜಕೂಡ್ಲು ಪ್ರಾರ್ಥನೆ ಹಾಡಿದರು. ಫಿರ್ಕಾ ಪ್ರತಿನಿಧಿ ಹರಿಪ್ರಸಾದ್ ಶೆಟ್ಟಿ ಮಾಯಿಲಂಗಿ ಕಾರ್ಯಕ್ರಮ ನಿರೂಪಿಸಿದರು.