ಬದಿಯಡ್ಕ: ಮೊಗೇರ ಸಮುದಾಯದ ಯುವ ವಿಜ್ಞಾನಿ ಬೇಳ ದರ್ಭೆತ್ತಡ್ಕದ ಅಶ್ವಿನ್ ರಾಜು ಅವರ ಸಾಧನೆ ಅಭಿನಂದನೀಯವೆಂದು ಮದರು ಮಹಾಮಾತೆ ಮೊಗೇರ ಸಮಾಜದ ಗೌರವಾಧ್ಯಕ್ಷ ಆನಂದ ಕೆ.ಮವ್ವಾರು ಹೇಳಿದರು.
ಜಪಾನ್‍ನಲ್ಲಿ ನಡೆಯುವ 39ನೇ ಅಂತಾರಾಷ್ಟ್ರೀಯ ರಾಡಾರ್ ಟೆಕ್ನಾಲಜಿಯ ಮಹಾಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಲು ತೆರಳುತ್ತಿರುವ ಅಶ್ವಿನ್ ರಾಜು ಡಿ.ಕೆ. ಅವರನ್ನು ಅಭಿನಂದಿಸಿ ಬೀಳ್ಕೊಡುವ ಸಭೆಯನ್ನು ಸಮಿತಿಯ ನೀರ್ಚಾಲು ಘಟಕ ಕಚೇರಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಅಶ್ವಿನ್ ರಾಜು ಅವರ ಸಾಧನೆ ಕಾಸರಗೋಡಿಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೇ ಹೆಸರು ತಂದಿದೆ. ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸುವ ಕಾರ್ಯಕ್ರಮಕ್ಕೆ ಶೀಘ್ರದಲ್ಲೇ ರೂಪುರೇಖೆ ನೀಡುವುದಾಗಿ ಆನಂದ ಕೆ.ಮವ್ವಾರು ಹೇಳಿದರು.
ಮದರುಮಾತೆ ಮೊಗೇರ ಸಮಾಜದ ಅಧ್ಯಕ್ಷ ವಸಂತ ಅಜಕ್ಕೋಡು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜದ ಹಿರಿಯ ಸಲಹೆಗಾರರಾಗಿರುವ ಕೃಷ್ಣ ದರ್ಬೆತ್ತಡ್ಕ ಅವರ ಸುಪುತ್ರ ಅಶ್ವಿನ್ ರಾಜು ಅವರು ಸಂಶೋಧನಾ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅದ್ವಿತೀಯವಾದದ್ದು. ರಾಡಾರ್ ತಂತ್ರಜ್ಞಾನದಲ್ಲಿ ಇಡೀ ದೇಶದಲ್ಲೇ ಮೊತ್ತಮೊದಲ ಬಾರಿಗೆ ಕಾಸರಗೋಡಿನ ಮೊಗೇರ ಯುವ ವಿಜ್ಞಾನಿಗೈದಿರುವ ಸಾಧನೆ ಅಭಿಮಾನದ ವಿಷಯ. ಆದರೆ ಪ್ರತಿಭೆ, ಪರಿಶ್ರಮಕ್ಕೆ ಸೂಕ್ತ ಪ್ರಚಾರ ಇನ್ನೂ ಲಭಿಸಿಲ್ಲ. ಮದರು ಮಹಾಮಾತೆ ಮೊಗೇರ ಸಮಾಜದ ನೇತೃತ್ವದಲ್ಲಿ ಅವರನ್ನು ಅಭಿನಂದಿಸಿ ಅವರ ಸಂಶೋಧನೆಯ ಮಹತ್ವವನ್ನು ವಿದ್ಯಾರ್ಥಿ, ಯುವಜನರಿಗೆ ತಿಳಿಸುವ ಒಂದು ಕಾರ್ಯಕ್ರಮವನ್ನು ಕೂಡಲೇ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಸಂಘಟನೆಯ ಗೌರವ ಸಲಹೆಗಾರರಾದ ರಾಮಪ್ಪ ಮಂಜೇಶ್ವರ, ಕೃಷ್ಣ ದರ್ಬೆತ್ತಡ್ಕ, ಡಿ. ಶಂಕರ, ಕೃಷ್ಣದಾಸ್ ದರ್ಬೆತ್ತಡ್ಕ, ಪದಾಧಿಕಾರಿಗಳಾದ ಹರೀಶ್ಚಂದ್ರ ಪುತ್ತಿಗೆ, ಸುರೇಶ್ ಅಜಕ್ಕೋಡು, ಶಶಿಧರ ಅಜಕ್ಕೋಡು, ಅನಿಲ್ ಅಜಕ್ಕೋಡು, ಸುಂದರ ಮಾಳಂಗೈ, ಸುರೇಶ್ ಕೊಲ್ಯ, ಕಿಶೋರ್ ಕೊಲ್ಯ, ಸುಂದರ ಬಾರಡ್ಕ, ಜಯರಾಮಪ್ಪ ಮೊದಲಾದವರು ಅಶ್ವಿನ್ ರಾಜು ಅವರಿಗೆ ಅಭಿನಂದನೆ ಸಲ್ಲಿಸಿದರು. ರಾಮ ಪಟ್ಟಾಜೆ ಸ್ವಾಗತಿಸಿ ವಿಷಯ ಮಂಡಿಸಿದರು. ಸುಧಾಕರ ಬೆಳ್ಳಿಗೆ ವಂದಿಸಿದರು.