ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 59ನೇ ಚಾತುರ್ಮಾಸ್ಯ ವ್ರತದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಭಜನಾ ಸಂಕೀರ್ತನೆಯ ಮಂಗಳೋತ್ಸವ ಶನಿವಾರ ರಾತ್ರಿ ಶ್ರೀಮಠದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡು ನಾಮ ಸಂಕೀರ್ತನೆ ನಡೆಸಿದರು. ಈ ಸಂದರ್ಭ ಆಶೀರ್ವಚನಗೈದ ಶ್ರೀಗಳು ಚಾತುರ್ಮಾಸ್ಯ ವ್ರತಾನುಷ್ಠಾನವು ಸರ್ವರ ಸಹಕಾರದೊಂದಿಗೆ ಯಶಸ್ವಿಯಾಗಿದೆ. ಭಗವಂತನ ನಿತ್ಯ ನಾಮ ಸ್ಮರಣೆಯಿಂದ ಮಾನಸಿಕ ಕ್ಲೇಶಗಳು ದೂರಗೊಂಡು ಅನುಗ್ರಹ ಪ್ರಾಪ್ತಿಯಾಗುವುದು ಎಂದು ತಿಳಿಸಿದರು. ಸತ್ಕರ್ಮಗಳಲ್ಲಿ ನಿತ್ಯ ತೊಡಗಿಸುವಿಕೆಯು ದುರಿತಗಳನ್ನು ದೂರಗೊಳಿಸುವುದು. ಜೀವನದ ಪ್ರತಿ ಘಳಿಗೆಯಲ್ಲೂ ನಮ್ಮ ಕರ್ಮಗಳು ಭಗವದರ್ಪಣೆಯ ಭಾವ ನೆಮ್ಮದಿಗೆ ಕಾರಣವಾಗುವುದು ಎಂದು ತಿಳಿಸಿದರು.
ಭಜನಾ ಮಂಗಳೋತ್ಸವದ ಗುರುವಂದನೆ, ಪ್ರಸಾದ ವಿತರಣೆಯೊಂದಿಗೆ ಸಮಾರೋಪಗೊಂಡಿತು.


