ಉಪ್ಪಳ: ಭಾರತೀಯ ಮಜ್ದೂರ್ ಸಂಘ (ಬಿ ಎಂ ಎಸ್) ಪೈವಳಿಗೆ ಘಟಕದ ವತಿಯಿಂದ ಇಂದು(ಸೆ.17) ವಿಶ್ವಕರ್ಮ ಜಯಂತಿ ಪ್ರಯುಕ್ತ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ಕ್ಕೆ ಬಾಯಾರು ಗ್ರಾಮಕಚೇರಿ ಪರಿಸರದಿಂದ ಬಾಯಾರು ಪದವಿನ ತನಕ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ನಡೆಯಲಿದೆ. ಸಭೆಯಲ್ಲಿ ಬಿ.ಎಂ.ಎಸ್. ಜಿಲ್ಲಾಧ್ಯಕ್ಷ ನ್ಯಾಯವಾದಿ ಮುರಳೀಧರನ್ ಭಾಗವಹಿಸುವರು. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಬಿಎಂಎಸ್ ಪದಾಧಿಕಾರಿಗಳು ವಿನಂತಿಸಿದ್ದಾರೆ.